ರೂಪಾಯಿ ಮೌಲ್ಯದ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಬಂಗಾರ-ಬೆಳ್ಳಿ ಬೆಲೆ ಮೂರನೇ ದಿನವೂ ಇಳಿಕೆ ಕಂಡಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಹತ್ತು ಗ್ರಾಂಗೆ 52 ಸಾವಿರ ರೂಪಾಯಿಗೆ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 700 ರೂಪಾಯಿ ಇಳಿಕೆ ಕಂಡಿದೆ.
ಡಾಲರ್ ಸೂಚ್ಯಂಕದಲ್ಲಾದ ಬದಲಾವಣೆಯಿಂದಾಗಿ ಗುರುವಾರ ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರ ಕುಸಿದಿದೆ. ಶುಕ್ರವಾರ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಶುದ್ಧ ಚಿನ್ನದ ಬೆಲೆ ಹತ್ತು ಗ್ರಾಂಗೆ 51,826 ರೂಪಾಯಿಗಳಿಂದ 51,770 ರೂಪಾಯಿಗೆ ಇಳಿದಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 1500 ರೂಪಾಯಿ ಇಳಿದಿದೆ.
ಇನ್ನು ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ಹತ್ತು ಗ್ರಾಂಗೆ 69,109 ರೂಪಾಯಿಗಳಿಂದ 68,371 ರೂಪಾಯಿಗೆ ಇಳಿದಿದೆ.