alex Certify ಸಣ್ಣ – ಮಧ್ಯಮ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ – ಮಧ್ಯಮ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ ಕೊಡುಗೆ

ದೇಶದಲ್ಲಿ ಆರ್ಥಿಕ ಸ್ಥಿತಿಯನ್ನ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ಮೌಲ್ಯದ ತುರ್ತು ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​ನ್ನು ನವೆಂಬರ್​ 30ರವರೆಗೆ ವಿಸ್ತರಣೆ ಮಾಡಿದೆ. ಇದು ಹಬ್ಬದ ಸೀಸನ್​ ಆಗಿರುವ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಅನುಕೂಲವಾಗಬಹುದೆಂಬ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಆತ್ಮ ನಿರ್ಭರ್​ ಭಾರತ್​ ಪ್ಯಾಕೇಜ್​ನ ಭಾಗವಾಗಿ ಎಂಎಸ್​ಎಂಇಗಳು, ವ್ಯಾಪಾರೋದ್ಯಮ ಹಾಗೂ ವ್ಯಾಪಾರ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಮುದ್ರಾ ಸಾಲಗಾರರಿಗೆ ಹೆಚ್ಚಿನ ಅನುಕೂಲ ನೀಡುವುದಕ್ಕೋಸ್ಕರ 20.97 ಲಕ್ಷ ಕೋಟಿ ರೂಪಾಯಿ ತುರ್ತು ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​ನ್ನ ಘೋಷಣೆ ಮಾಡಿತ್ತು .

ಫೆಬ್ರವರಿ 29ರ ವೇಳೆಯಲ್ಲಿ 50 ಕೋಟಿ ರೂಪಾಯಿವರೆಗೆ ಸಾಲ ಹೊಂದಿರುವವರು ಹಾಗೂ ವಾರ್ಷಿಕ 250 ಕೋಟಿ ವಹಿವಾಟು ನಡೆಸುವವರು ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳವರೆಗೆ ಸಾಲ ವಿತರಣೆ ಮಾಡಲಾಗುತ್ತೆ. ಅಲ್ಲದೇ ಒಂದು ವರ್ಷದವರೆಗೆ ಮೊರಟೋರಿಯಂ ಅವಧಿ ಕೂಡ ನೀಡಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...