ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಬೆನ್ನಲ್ಲೇ ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಹಲವು ರಾಜ್ಯಗಳು ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿವೆ. ಜೊತೆಗೆ ಸೋಂಕು ತೀವ್ರ ಹೆಚ್ಚಳಗೊಂಡಿರುವ ನಗರಗಳಲ್ಲಿ ಲಾಕ್ಡೌನ್ ಸಹ ಮಾಡಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ಬಳಿಕ ದೇಶದಾದ್ಯಂತ ಲಾಕ್ಡೌನ್ ವಿಧಿಸಬಹುದೆಂಬ ವದಂತಿ ಕೇಳಿಬರುತ್ತಿದ್ದು, ಸಹಜವಾಗಿಯೇ ಇದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸೂಚಂಕ್ಯ ಕುಸಿಯುತ್ತಿದ್ದು, ಷೇರುಗಳ ಬೆಲೆಯು ಇಳಿಕೆ ಕಾಣುತ್ತಿದೆ. ಇದು ಹೂಡಿಕೆದಾರರನ್ನು ಕಂಗಾಲಾಗಿಸಿದೆ.
ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು HDD ಸಲಹೆ
ಹೀಗಾಗಿಯೇ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಸಾಧನ ಎಂದು ಪರಿಗಣಿಸಲಾಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಇದರಿಂದಾಗಿ ಚಿನ್ನದ ಬೆಲೆ ಬುದುವಾರ ಒಂದೇ ದಿನ 700 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಬೆಲೆ ಈಗ 44,850 ರೂಪಾಯಿ ತಲುಪಿದೆ.