ದೇಶದಅ ತಿ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಸಾಲಮುಕ್ತವಾಗಿದೆ. ಈ ವಿಚಾರವನ್ನು ಸ್ವತಃ ಮುಖೇಶ್ ಅಂಬಾನಿಯೇ ಘೋಷಣೆ ಮಾಡಿದ್ದು, ಷೇರುದಾರರಿಗೆ ಖುಷಿಯ ವಿಚಾರ ಹೇಳಿದ್ದಾರೆ.
ಕಳೆದ 78 ದಿನಗಳಲ್ಲಿ ಜಿಯೋ ಮೇಲಿನ ಹೂಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನ ಸಾಲವನ್ನು ತೀರಿಸಿದ್ದಾರೆ ಮುಖೇಶ್ ಅಂಬಾನಿ. ಈ ಸಾಲವನ್ನು ಮುಂದಿನ ವರ್ಷ ತೀರಿಸಲಾಗುತ್ತೆ ಎಂದು ಭರವಸೆ ನೀಡಿದ್ದರು ಅಂಬಾನಿ. ಆದರೆ ಇದೀಗ 10 ತಿಂಗಳ ಮುಂಚಿತವಾಗಿಯೇ ಸಾಲ ತೀರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖೇಶ್ ಅಂಬಾನಿ, 2021ಕ್ಕೆ ಸಾಲ ತೀರಿಸಲು ಭರವಸೆ ನೀಡಿದ್ದೆ. ಆದರೆ ನೀಡಿದ್ದ ಭರವಸೆಯನ್ನು ಅವಧಿಗೂ ಮುನ್ನ ಪೂರೈಸಿದ್ದೇನೆ. ಷೇರುದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.