ಏರ್ಟೆಲ್‌ನ ಮತ್ತು ವೊಡಾಫೋನ್-ಐಡಿಯಾ ರೆಡ್‌ಎಕ್ಸ್ ಪ್ರೀಮಿಯಂ ಯೋಜನೆಗಳನ್ನು ಟೆಲಿಕಾಂ ನಿಯಂತ್ರಕವು ನಿರ್ಬಂಧಿಸಿದೆ. ಎರಡೂ ಕಂಪನಿಗಳ ಈ ಯೋಜನೆಗಳು ಬಳಕೆದಾರರಿಗೆ ವೇಗವಾಗಿ ಡೇಟಾ ಸೇವೆಗಳನ್ನು ನೀಡುತ್ತಿದ್ದವು. ಈ ಯೋಜನೆಗೆ ರೀಚಾರ್ಜ್ ಮಾಡುವ ಬಳಕೆದಾರರಿಗೆ ಉಳಿದವುಗಳಿಗಿಂತ ಹೆಚ್ಚು ವೇಗದ ಇಂಟರ್ನೆಟ್ ಸಿಗ್ತಿತ್ತು.
ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿರ್ಧಾರದ ಬಗ್ಗೆ ವೊಡಾಫೋನ್-ಐಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಟೆಲಿಕಾಂ ಆಪರೇಟರ್ ಯೋಜನೆಯನ್ನು ನಿರ್ಬಂಧಿಸಿರುವುದನ್ನು ಖಂಡಿಸಿದ್ದಾರೆ. ಒಂದು ವಾರದೊಳಗೆ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಟ್ರಾಯ್ ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ರಾಯ್, ಕಂಪನಿಗೆ ಯಾವುದೇ ಉತ್ತರ ನೀಡಲು ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಈ ಯೋಜನೆಗಳು ಸಮಾಜದಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸುತ್ತಿದೆ. ಈ ಸೇವೆಯನ್ನು ಪಡೆಯುವ ಗ್ರಾಹಕರು ಶ್ರೀಮಂತರ ಪಟ್ಟಿಯಲ್ಲಿ ಬರಲಿದ್ದು, ಅವರಿಗೆ ಉಳಿದ ಗ್ರಾಹಕರಿಗಿಂತ ಹೆಚ್ಚಿನ ಹಾಗೂ ಉತ್ತಮ ಸೇವೆಯನ್ನು ನೀಡ್ತಿದೆ ಎಂದು ಟ್ರಾಯ್ ಹೇಳಿದೆ.