ಸಿಮ್ ಕಾರ್ಡ್ ಬದಶೀಲಿಸಲು ಗ್ರಾಹಕರು ಇನ್ಮುಂದೆ ಟೆಲಿಕಾಂ ಮಳಿಗೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಗ್ರಾಹಕರು ಪರಿಶೀಲನಾ ಪ್ರಕ್ರಿಯೆಗೆ ದೂರಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ. ದೂರಸಂಪರ್ಕ ಇಲಾಖೆ ಅಂತಿಮ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಗ್ರಾಹಕರು ಮಾಹಿತಿ ಪರಿಶೀಲನೆಗೆ ದಾಖಲೆಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ನೀಡಬೇಕು. ದಾಖಲೆಗಳು ಸಿಗ್ತಿದ್ದಂತೆ ಸಿಮ್ ಕಾರ್ಡ್ ಮನೆಗೆ ಬರಲಿದೆ. ಗ್ರಾಹಕರು ನಂಬರ್ ಸಕ್ರಿಯಗೊಳಿಸಬೇಕು. ಅಪ್ಲಿಕೇಷನ್ ನಲ್ಲಿ ಗ್ರಾಹಕರ ಫೋಟೋವನ್ನು ಅಪ್ಲೋಡ್ ಮಾಡಬೇಕು. ಮತ್ತೊಂದು ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.
ಸಿಮ್ ಕಾರ್ಡ್ ಪರಿಶೀಲನೆಯಲ್ಲಿ ವಂಚನೆಯನ್ನು ತಡೆಯಲು ದೂರಸಂಪರ್ಕ ಇಲಾಖೆ ಪರಿಶೀಲನೆ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ಹೊಸ ಸಂಪರ್ಕವನ್ನು ನೀಡುವ ಮೊದಲು, ಕಂಪನಿಯ ನೋಂದಣಿಯನ್ನು ಪರಿಶೀಲಿಸಬೇಕಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಕಂಪನಿಯ ಪರಿಶೀಲನೆ ನಡೆಯಲಿದೆ. ಕಂಪನಿಗಳ ಹೆಸರಿನಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.