ನೌಕರರ ಭವಿಷ್ಯ ನಿಧಿ ಸಂಸ್ಥೆ 2019-2020 ರ ಆರ್ಥಿಕ ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಯ ಹಣವನ್ನು ನೀಡಲಿದೆ. ಎರಡು ಕಂತಿನಲ್ಲಿ ಬಡ್ಡಿ ಹಣವನ್ನು ಪಾವತಿಸಲಿದೆ. ಪಿಎಫ್ ಖಾತೆದಾರರಿಗೆ ಶೇಕಡಾ 8.50 ದರದಲ್ಲಿ ಬಡ್ಡಿ ಸಿಗಲಿದೆ. ಮೊದಲ ಕಂತಿನಲ್ಲಿ ಶೇಕಡಾ 8.15 ರಷ್ಟು ಬಡ್ಡಿಯನ್ನು ಪಾವತಿಸಲಿದೆ. ಡಿಸೆಂಬರ್ ವೇಳೆಗೆ ಶೇಕಡಾ 0.35 ರಷ್ಟು ಬಡ್ಡಿಯನ್ನು ಪಾವತಿಸಲಿದೆ.
ನಿಮ್ಮ ಖಾತೆಗೆ ಪಿಎಫ್ ಬಡ್ಡಿ ಬಂದಿರುವುದನ್ನು ಒಂದು ಮಿಸ್ಡ್ ಕಾಲ್ ಮೂಲಕ ಪರಿಶೀಲಿಸಬಹುದು. ಬ್ಯಾಲೆನ್ಸ್ ಕೂಡ ಮಿಸ್ಡ್ ಕಾಲ್ ಮೂಲಕ ನೋಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇಪಿಎಫ್ಒ ಸಂದೇಶದ ಮೂಲಕ ನಿಮಗೆ ಪಿಎಫ್ ವಿವರದ ಮಾಹಿತಿ ಸಿಗಲಿದೆ.
ನಿಮ್ಮ ಬ್ಯಾಂಕ್ ಖಾತೆ ನಂಬರ್, ಪಾನ್ ಮತ್ತು ಆಧಾರ್, ಮೊಬೈಲ್ ನಂಬರ್ ಯುಎಎನ್ ಜೊತೆ ಲಿಂಕ್ ಆಗಿರಬೇಕು. ಗ್ರಾಹಕರಿಗೆ ಇದ್ರಲ್ಲಿ ಉಚಿತವಾಗಿ ಮಾಹಿತಿ ಸಿಗುತ್ತದೆ. ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು, https://unifiedportal-mem.epfindia.gov.in/memberinterface ಈ ಲಿಂಕ್ ಕ್ಲಿಕ್ ಮಾಡಬೇಕು.