ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಟಕ್ಕರ್ ನೀಡಲು ನಾಲ್ಕು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳು 449 ರೂಪಾಯಿಗಳಿಂದ 1499 ರೂಪಾಯಿವರೆಗಿದೆ. ಈ ಯೋಜನೆಗಳಲ್ಲಿ ಗ್ರಾಹಕರು ಕರೆ ಮಾಡುವುದರ ಜೊತೆಗೆ ಹೆಚ್ಚಿನ ವೇಗದ ಡೇಟಾವನ್ನು ಪಡೆಯುತ್ತಾರೆ.
ಫೈಬರ್ ಬೇಸಿಕ್ ಹೆಸರಿನಲ್ಲಿ 449 ರೂಪಾಯಿಗಳ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು 30 ಎಂಬಿಪಿಎಸ್ ವೇಗ ಮತ್ತು 3300 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಡೇಟಾ ಖಾಲಿಯಾದಾಗ ಇಂಟರ್ನೆಟ್ ವೇಗವು 2 ಎಂಬಿಪಿಎಸ್ ಆಗಿದೆ. ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್ ವಲಯವನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿರುತ್ತದೆ. ಬಿಎಸ್ಎನ್ಎಲ್ ಬಳಕೆದಾರರು ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಸಹ ಪಡೆಯಲಿದ್ದಾರೆ.
799 ಯೋಜನೆಯನ್ನು ಫೈಬರ್ ವ್ಯಾಲ್ಯೂ ಪ್ಲ್ಯಾನ್ ಹೆಸರಿನಲ್ಲಿ ಪರಿಚಯಿಸಲಾಗಿದೆ. ಇದರ ಮಾಸಿಕ ಬೆಲೆ 799 ರೂಪಾಯಿ. ಈ ಯೋಜನೆಯಲ್ಲಿ ಬಳಕೆದಾರರು 100 ಎಂಬಿಪಿಎಸ್ ವೇಗ ಮತ್ತು 3300ಜಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ, ಉಚಿತ ಲ್ಯಾಂಡ್‌ಲೈನ್ ಸಂಪರ್ಕ ಪಡೆಯಬಹುದು.
999 ರೂಪಾಯಿ ಯೋಜನೆಯಲ್ಲಿ 3.3 ಟಿಬಿ ಡೇಟಾ ಲಭ್ಯವಿರುತ್ತದೆ. ಬಳಕೆದಾರರು 200ಎಂಬಿಪಿಎಸ್ ವೇಗದಲ್ಲಿ 3.3ಟಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಸೌಲಭ್ಯ ಸಿಗ್ತಿದೆ.
1499 ರೂಪಾಯಿ ಯೋಜನೆಗೆ ಫೈಬರ್ ಅಲ್ಟ್ರಾ ಎಂದು ಹೆಸರಿಡಲಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು 300ಎಂಬಿಪಿಎಸ್ ವೇಗದಲ್ಲಿ 4ಟಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಉಚಿತ ಲ್ಯಾಂಡ್‌ಲೈನ್ ಸಂಪರ್ಕ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಪ್ರೀಮಿಯಂ ಚಂದಾದಾರಿಕೆ ಸಹ ಸಿಗ್ತಿದೆ.