ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಂದಂತಾಗಿದೆ. ಯಾವ ಮಾರ್ಗದಲ್ಲಿ ಸೋಂಕು ಮನುಷ್ಯನಿಗೆ ತಗುಲುತ್ತದೆಯೋ ಗೊತ್ತಿಲ್ಲ. ಹೀಗಾಗಿ ಅನೇಕ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಜೊತೆಗೆ ಇದೀಗ ವಿಮಾ ನಿಯಂತ್ರಣ ಪ್ರಾಧಿಕಾರ ಸಿಹಿಸುದ್ದಿಯೊಂದನ್ನು ನೀಡಿದೆ.
ಹೌದು, ಐಆರ್ಡಿಎಐ ಸುತ್ತೋಲೆಯೊಂದನ್ನ ಹೊರಡಿಸಿದೆ. ಈ ಸುತ್ತೋಲೆ ಪ್ರಕಾರ ಇನ್ಮುಂದೆ ಅಲ್ಪಾವಧಿಯ ಇನ್ಶುರೆನ್ಸ್ ಮಾಡಿಸಬಹುದಾಗಿದೆ. ಈ ಕುರಿತು ದೇಶದ ಆರೋಗ್ಯ ಮತ್ತು ಸಾಮಾನ್ಯ ವಿಮಾ ಕಂಪನಿಗಳಿಗೆ ವಿನಾಯ್ತಿ ನೀಡಿದೆ.
ಕನಿಷ್ಠ 3 ತಿಂಗಳು ಮತ್ತು ಗರಿಷ್ಠ 11 ತಿಂಗಳವರೆಗೆ ಅಲ್ಪಾವಧಿಯ ಪಾಲಿಸಿಗಳನ್ನು ನೀಡಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಕೊರೊನಾ ರೋಗದ ಎಲ್ಲಾ ವರ್ಗದವರಿಗೂ ವಿಮಾ ರಕ್ಷಣೆಯನ್ನು ಒದಗಿಸಲು ಈ ವ್ಯವಸ್ಥೆ ಮಾಡಲಾಗಿದೆ.