ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಪ್ರಾರಂಭವಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಆಹಾರ ನೀಡುವ ಬಗ್ಗೆಯೂ ಸರ್ಕಾರ ಸೂಚನೆ ನೀಡಿದೆ. ಬಿಸಿ ಆಹಾರ, ಪ್ಯಾಕ್ ಮಾಡಿದ ಆಹಾರ ನೀಡುವ ಬಗ್ಗೆಯೂ ತಿಳಿಸಿದೆ. ಹಾಗೂ ಆಹಾರ ನೀಡುವಾಗ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಹೇಳಿದೆ. ಪ್ರಯಾಣಿಕರಿಗೆ ಆಹಾರ ಅಥವಾ ಪಾನಿಯಗಳನ್ನು ನೀಡುವಾಗ ಯೂಸ್ ಅಂಡ್ ಥ್ರೋ ಟ್ರೇ ಹಾಗೂ ತಟ್ಟೆ ಬಳಸಬೇಕು. ಎಲ್ಲಾ ಸಿಬ್ಬಂದಿಗಳು ಗ್ಲೌಸ್ ಹಾಕಿರಲೇ ಬೇಕು ಎಂದು ತಿಳಿಸಿದೆ.
ಇನ್ನು ವಿಮಾನದಲ್ಲಿ ಫೇಸ್ ಮಾಸ್ಕ್ ಧರಿಸಲೇ ಬೇಕು. ಪ್ರಯಾಣಿಕ ಈ ಫೇಸ್ ಮಾಸ್ಕ್ ಧರಿಸೋದಿಕ್ಕೆ ನಿರಾಕರಿಸಿದರೆ ಅಂತವರನ್ನು ನೋ ಫ್ಲೈ ಪಟ್ಟಿಯಲ್ಲಿ ಸೇರಿಸಬಹುದು ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಸೋಂಕು ಹರಡುವುದನ್ನು ತಡೆಯೋದಿಕ್ಕೆ ಸಾಕಷ್ಟು ಕ್ರಮಗಳನ್ನು ವಿಮಾನಯಾನದಲ್ಲಿ ತೆಗೆದುಕೊಳ್ಳಲಾಗುತ್ತಿದೆ.