ಕೊರೊನಾ ಅನೇಕ ಉದ್ಯಮ,ಉದ್ಯೋಗಿಗಳ ಹೊಟ್ಟೆ ಮೇಲೆ ತಣ್ಣೀರು ಪಟ್ಟಿ ಹಾಕಿದೆ. ಇದಕ್ಕೆ ಏರ್ ಇಂಡಿಯಾ ಕೂಡ ಈಗ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ದೇಶದ ವಾಯುಯಾನ ಕ್ಷೇತ್ರದಲ್ಲಿ ಮಂದಗತಿಯ ಕಾರಣ ರಾಷ್ಟ್ರೀಯ ವಾಯುಯಾನ ಕಂಪನಿ ಏರ್ ಇಂಡಿಯಾ 180 ತರಬೇತಿ ಕ್ಯಾಬಿನ್ ಸಿಬ್ಬಂದಿ ಸದಸ್ಯರ ಉದ್ಯೋಗ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು.
ವಿಮಾನಯಾನ ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ. 180 ಪ್ರಶಿಕ್ಷಣಾರ್ಥಿಗಳಿಂದ ಏರ್ ಇಂಡಿಯಾ ಉದ್ಯೋಗ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತರಬೇತಿ ಮುಗಿದ ನಂತರ ಅವರನ್ನು ಏರ್ ಇಂಡಿಯಾದಲ್ಲಿ ನೇಮಿಸಬೇಕಿತ್ತು.
ತರಬೇತಿಯ ಪ್ರಾರಂಭದಲ್ಲಿ ಟ್ರೈನಿ ಸಲ್ಲಿಸಿದ್ದ ಬ್ಯಾಂಕ್ ಗ್ಯಾರಂಟಿಯನ್ನು ಹಿಂದಿರುಗಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಕೊರೊನಾ ವೈರಸ್‌ನಿಂದಾಗಿ ದೇಶ ಮತ್ತು ವಿದೇಶಿ ಪ್ರಯಾಣ ನಿರ್ಬಂಧದಿಂದಾಗಿ ವಾಯುಯಾನ ಕ್ಷೇತ್ರವು ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಎಲ್ಲಾ ವಿಮಾನಯಾನ ಕಂಪನಿಗಳು ವೆಚ್ಚ ಕಡಿತ ಮತ್ತು ನೌಕರರನ್ನು ತೆಗೆದುಹಾಕುವ ಕೆಲಸ ಮಾಡ್ತಿವೆ.