ಗೂಗಲ್ ಅಸಿಸ್ಟೆಂಟ್ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಫೋನ್ ಟಚ್ ಮಾಡದೆ ಈ ಹಿಂದೆ ಫೋನ್ ಮಾಡಬಹುದಿತ್ತು.
ಶೀಘ್ರವೇ ವಾಟ್ಸಾಪ್ ಧ್ವನಿ ಕರೆ ಹಾಗೇ ವಿಡಿಯೋ ಕರೆಗಳಲ್ಲೂ ಇದು ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿತ್ತು. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಮುಖಪುಟದಲ್ಲಿ ಗೂಗಲ್ ಅಸಿಸ್ಟೆಂಟ್ ಮೂಲಕ ವಾಟ್ಸಾಪ್‌ನ ಕೆಲವು ಆಯ್ಕೆಗಳನ್ನು ಬಳಸಲು ಸಾಧ್ಯವಾಗುತ್ತದೆ.
ಈ ಮೊದಲು ಬಳಕೆದಾರರಿಗಾಗಿ ಧ್ವನಿ ಕರೆ ಮಾಡಲು ಗೂಗಲ್ ನೆಟ್‌ವರ್ಕ್ ಕರೆಗಳನ್ನು ಸಕ್ರಿಯಗೊಳಿಸಿತ್ತು. ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಇದ್ದರೆ, ಸರಿ ಗೂಗಲ್ ಅಥವಾ ಹೇ ಗೂಗಲ್ ಎಂದು ಹೇಳುವ ಮೂಲಕ ನೀವು ನೇರವಾಗಿ ಆಜ್ಞೆಯನ್ನು ನೀಡಬಹುದು. ಬಳಕೆದಾರರು ತಮ್ಮ ಸಾಧನದಲ್ಲಿನ ಹೋಮ್ ಬಟನ್ ಅನ್ನು ದೀರ್ಘಕಾಲ ಒತ್ತುವ ಮೂಲಕ ಅಥವಾ ಪ್ರತ್ಯೇಕ ಗುಂಡಿಯನ್ನು ಬಳಸುವ ಮೂಲಕ ಅಸಿಸ್ಟೆಂಟ್ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಬಹುದು.
ನೀವು ಇವರಿಗೆ ವಾಟ್ಸಾಪ್ ಕಾಲ್ ಮಾಡು ಗೂಗಲ್ ಎನ್ನಬಹುದು. ಇಲ್ಲವೆ ಇವರಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡು ಎನ್ನಬಹುದು. ಅತಿ ಹೆಚ್ಚು ವಿಡಿಯೋಕಾಲ್ ಮಾಡಿವ ವ್ಯಕ್ತಿ ಹೆಸರಿಗೆ ನಿಕ್ ನೇಮ್ ನೀಡುವ ವ್ಯವಸ್ಥೆಯೂ ಇದ್ರಲ್ಲಿದೆ.