ಕೊರೊನಾ ಕಾರಣಕ್ಕೆ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಡಿಸೆಂಬರ್ ಕೊನೆಯವರೆಗೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ನಿರ್ಧರಿಸಿವೆ. ಇದ್ರಿಂದಾಗಿ ಬಾಡಿಗೆ ಕುರ್ಚಿ, ಟೇಬಲ್ ವ್ಯಾಪಾರ ವೇಗ ಪಡೆದಿದೆ.
ಯಸ್, ಅನೇಕರ ಮನೆಯಲ್ಲಿ ಆಫೀಸ್ ನಲ್ಲಿರುವ ಕುರ್ಚಿ, ಟೇಬಲ್ ಗಳಿಲ್ಲ. ಅದನ್ನು ಖರೀದಿ ಮಾಡುವ ಮನಸ್ಸು ಅನೇಕರಿಗಿಲ್ಲ. ಹಾಗಾಗಿ ತಾತ್ಕಾಲಿಕ ಪರಿಹಾರ ಹುಡುಕುತ್ತಿದ್ದಾರೆ. ಇದೇ ಕಾರಣಕ್ಕೆ ಬಾಡಿಗೆ ಕುರ್ಚಿ, ಟೇಬಲ್ ಗೆ ಬೇಡಿಗೆ ಹೆಚ್ಚಾಗಿದೆ.
ಬಾಡಿಗೆ ಕುರ್ಚಿ, ಟೇಬಲ್ ನೀಡುವ ಕಂಪನಿ ಫ್ಯಾಬ್ರಂಟೊ ಸಂಸ್ಥಾಪಕರು ಈ ಬಗ್ಗೆ ಮಾತನಾಡಿದ್ದಾರೆ. ಜೂನ್ ನಲ್ಲಿ ಬಾಡಿಗೆ ಟೇಬಲ್, ಕುರ್ಚಿಗೆ ಬೇಡಿಗೆ ಹೆಚ್ಚಾಗಿದೆ ಎಂದಿದ್ದಾರೆ. ಕುರ್ಚಿ, ಟೇಬಲ್ ಮಾತ್ರವಲ್ಲ ಕೆಲ ಜನರು ಮನೆ ಸಾಮಗ್ರಿಗಳನ್ನು ಕೂಡ ಬಾಡಿಗೆ ಪಡೆಯುತ್ತಿದ್ದಾರಂತೆ. ವರ್ಕ್ ಫ್ರಂ ಹೋಮ್ ನಿಂದ ಬಹುತೇಕ ಕಂಪನಿಗಳಿಗೆ ನಷ್ಟವಾಗಿಲ್ಲ. ಹಾಗಾಗಿ ಇದೇ ಕೆಲಸ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾರೆ.