ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಎನಿವೇರ್ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ತನ್ನ ಉದ್ಯೋಗಿಗಳನ್ನು ಸೋಂಕಿನ ಅಪಾಯದಿಂದ ರಕ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ. ಇದಕ್ಕಾಗಿ ಮೂಲಸೌಕರ್ಯಗಳನ್ನು ಬ್ಯಾಂಕ್ ಅಭಿವೃದ್ಧಿಪಡಿಸುತ್ತಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
ಎಸ್‌ಬಿಐನ ಸಂಪೂರ್ಣ ಗಮನವು ವೆಚ್ಚವನ್ನು ಕಡಿಮೆ ಮಾಡುವುದು, ನೌಕರರ ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ. ನೌಕರರ ಸಾಮಾಜಿಕ ಮತ್ತು ಕೆಲಸದ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಅವರ ಪ್ರಕಾರ, ಇದರಿಂದ ಬ್ಯಾಂಕ್‌ಗೆ 1,000 ಕೋಟಿ ರೂಪಾಯಿ ಉಳಿಯಲಿದೆಯಂತೆ.
2020-21 ಎಲ್ಲ ಬ್ಯಾಂಕ್ ಗಳಿಗೂ ಸವಾಲಿನ ವರ್ಷವಾಗಿದೆ. ಆದ್ರೆ ಎಸ್ಬಿಐ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ರಜನೀಶ್ ಹೇಳಿದ್ದಾರೆ. 6 ತಿಂಗಳಲ್ಲಿ ಯೋನೊ ಬಳಕೆದಾರರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ.