ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಹಾಗೂ ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಪ್ರಧಾನಮಂತ್ರಿ ಜನ್ ಧನ್ ಖಾತೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯಡಿ ಐದು ಸಾವಿರ ಹಾಗೂ ಜನ್ ಧನ್ ಖಾತೆಗೆ 500 ರೂ.ಗಳನ್ನು ಹಾಕಲಾಗಿದೆ. ಇದು ಬಡವರಿಗೆ ಸಾಕಷ್ಟು ಅನುಕೂಲ ಆಗಿದೆ. ಇದೇ ರೀತಿ ಪೋಸ್ಟ್ ಆಫೀಸ್ ಗಳಲ್ಲಿ ಖಾತೆ ಹೊಂದಿದ್ದರೆ ಆ ಖಾತೆಗಳಿಗೂ ಪಿಎಂ ಹಣ ಹಾಕುತ್ತಾರೆಂಬ ವದಂತಿ ಎದ್ದಿದೆ.
ಹೌದು, ನರಗುಂದದಲ್ಲಿ ಈ ರೀತಿಯ ವದಂತಿ ಎದ್ದಿದ್ದ ಹಿನ್ನೆಲೆಯಲ್ಲಿ ಅನೇಕ ಮಂದಿ ಪಟ್ಟಣದ ಅಂಚೆ ಕಚೇರಿ ಬಳಿ ಜಮಾಯಿಸಿದ್ದಾರೆ.
ಮಕ್ಕಳು, ವಯೋವೃದ್ಧರು ಸೇರಿದಂತೆ ಅನೇಕ ಮಂದಿ ವದಂತಿಯನ್ನು ನಂಬಿ ಅಂಚೆ ಕಚೇರಿ ಮುಂದೆ ಜಮಾಯಿಸಿ ಉಳಿತಾಯ ಖಾತೆ ತೆರೆಯುತ್ತಿದ್ದಾರೆ. ತಲಾ 5 ಸಾವಿರ ಹಣವನ್ನು ಹಾಕುತ್ತಾರೆ ಎಂಬ ಗಾಳಿಸುದ್ದಿ ಜೋರಾಗಿ ಹರಡಿದೆ.