ಅನೇಕ ಮಂದಿ ಆದಾಯ ತೆರಿಗೆ ಇಲಾಖೆಗೆ ಗೊತ್ತಿಲ್ಲದಂತೆ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತಾರೆ. ಈ ರೀತಿ ನೀವೇನಾದರೂ ದೊಡ್ಡ ಮೊತ್ತದ ಹಣವನ್ನು ಲೆಕ್ಕ ಕೊಡದೇ ಮುಚ್ಚಿಟ್ಟಿದ್ದರೆ ನಿಮಗೆ ಕಂಟಕ ಗ್ಯಾರಂಟಿ. ಯಾಕೆ ಅಂತೀರಾ ಮುಂದೆ ನೋಡಿ.
ಲೆಕ್ಕ ಕೊಡದೇ ಇಟ್ಟಿರೋ ಹಣ ಇದ್ದರೆ ಅದರ ಬಗ್ಗೆ ಪೂರ್ಣ ಮಾಹಿತಿ ನೀಡಿ ತೆರಿಗೆ ಕಟ್ಟಿಬಿಡಿ. ಈ ಲೆಕ್ಕ ಇರದೇ ಇಟ್ಟಿರುವ ಹಣದಲ್ಲಿ ನಿಮಗೆ ಕೇವಲ 17 ರಷ್ಟು ಮಾತ್ರ ನಿಮ್ಮ ಪಾಲಾಗುತ್ತದೆ. ಉಳಿದ ಹಣವೆಲ್ಲಾ ಆದಾಯ ತೆರಿಗೆ ತೆಗೆದುಕೊಳ್ಳುತ್ತದೆ. ಅಘೋಷಿತ ಆದಾಯದ ಕಾನೂನು ಪ್ರಕಾರ ಈ ರೀತಿ ಇದ್ದ ಹಣವನ್ನು ತೆರಿಗೆ ಇಲಾಖೆ ವಶಕ್ಕೆ ಪಡೆಯಬಹುದು ಎನ್ನಲಾಗಿದೆ.
ಇನ್ನು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 69 ಎ ಪ್ರಕಾರ ನೀವು ಇಟ್ಟ ಹಣ ಅಥವಾ ಮೌಲ್ಯಯುತ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು. ತೆರಿಗೆ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ದಾಖಲೆ ಸಹಿತ ಉತ್ತರ ನೀಡದೇ ಹೋದರೆ ಆ ಅಧಿಕಾರಿ ವಿಧಿಸುವ ತೆರಿಗೆ ಕಟ್ಟಲೇಬೇಕು. ಅದು ಸುಮಾರು ಶೇ.83 ತೆರಿಗೆ ಆಗಬಹುದು.