ಪಾರ್ಲೆ-ಜಿ ಯಾರಿಗೆ ತಾನೆ ಗೊತ್ತಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ಹಲವಾರು ಬೇರೆ ಬೇರೆ ಕಂಪನಿಗಳ ವೆರೈಟಿ ಬಿಸ್ಕೇಟ್‌ಗಳನ್ನು ನೋಡುತ್ತಿದ್ದೇವೆ. ಆದರೆ ನಾವು ಚಿಕ್ಕವರಿದ್ದಾಗಿಂದಲೂ ಹೆಚ್ಚು ಉಪಯೋಗಿಸುತ್ತಿದ್ದ ಹಾಗೂ ಗೊತ್ತಿದ್ದ ಬಿಸ್ಕೇಟ್ ಎಂದರೆ ಅದು ಪಾರ್ಲೆ-ಜಿ ಮಾತ್ರ.
ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚು ಪಾರ್ಲೆ-ಜಿ ಬಿಸ್ಕೇಟ್‌ನ ಜನ ಖರೀದಿ ಮಾಡಿದ್ದಾರಂತೆ. ಇದಕ್ಕೆ ಕಾರಣ ಅನೇಕರು ಬಡವರಿಗೆ ಆಹಾರ ಧಾನ್ಯಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಹಸಿದವರಿಗೆ ಬಿಸ್ಕೇಟ್, ನೀರು ನೀಡಿದ್ದಾರೆ. ಈ ಸಮಯದಲ್ಲಿ ಹೆಚ್ಚು ಖರೀದಿಯಾಗಿರುವುದು ಪಾರ್ಲೆ-ಜಿ ಬಿಸ್ಕೇಟ್ ಅಂತೆ.
ಲಾಕ್ ಡೌನ್ ಸಮಯದಲ್ಲಿ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ 5 ರಷ್ಟು ಪಾಲು ಪಡೆದಿದೆ ಪಾರ್ಲೆ-ಜಿ ಕಂಪನಿ. ಸುಮಾರು 40 ವರ್ಷಗಳಲ್ಲಿ ಈ ವರ್ಷದಷ್ಟು ಬೆಳವಣಿಗೆ ಹಾಗೂ ಮಾರಾಟ ಇನ್ಯಾವ ವರ್ಷವೂ ಕಂಡಿರಲಿಲ್ಲ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.