ದೇಶಾದ್ಯಂತ ರೈಲು ಸೇವೆಗಳು ಹಂತಹಂತವಾಗಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಭಾರತೀಯ ರೈಲ್ವೇಯ ಸೇವೆಗಳು ಮತ್ತೆ ಚಾಲನೆ ಕಾಣಲಿವೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಹಂತಹಂತವಾಗಿ ರೈಲು ಸೇವೆಗಳನ್ನು ಪುನಾರಂಭಗೊಳಿಸುತ್ತಿರುವ ರೈಲ್ವೇ, ಸದ್ಯದ ಮಟ್ಟಿಗೆ ತನ್ನ ಸಾಮರ್ಥ್ಯದ 65% ರೈಲುಗಳನ್ನು ಓಡಿಸುತ್ತಿದೆ. ಜನವರಿ ತಿಂಗಳಲ್ಲೇ 250ಕ್ಕೂ ಹೆಚ್ಚು ರೈಲುಗಳನ್ನು ಹಳಿಗೆ ಬಿಡಲಾಗಿದೆ.
ವಾಹನ ಸವಾರರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ
ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಕಳೆದ ವರ್ಷದ ಮಾರ್ಚ್‌ನಿಂದ ದೇಶಾದ್ಯಂತ ರೈಲು ಸೇವೆಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.
ರೈಲು ಸೇವೆಗಳನ್ನು ಮತ್ತೆ ಆರಂಭಿಸುವ ಸಂಬಂಧ ಸಂಬಂಧಿತ ಎಲ್ಲ ಮಂದಿಯ ಅಭಿಪ್ರಾಯಗಳನ್ನು ತೆಗೆದುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿರುವ ರೈಲ್ವೇ, ಹಬ್ಬದ ಸಂದರ್ಭಗಳಲ್ಲಿ ಸಾರ್ವಜನಿಕ ಬೇಡಿಕೆ ಹೆಚ್ಚುವುದನ್ನು ಗಮನದಲ್ಲಿ ಇಟ್ಟುಕೊಂಡು ಇನ್ನಷ್ಟು ಹೆಚ್ಚಿನ ರೈಲುಗಳನ್ನು ಹಳಿಗೆ ಬಿಡುವ ಸಾಧ್ಯತೆಗಳು ಇವೆ.