ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಪಿಎಂ ಕಿಸಾನ್ ಸ್ಕೀಂಗೆ 18 ತಿಂಗಳು ಪೂರ್ಣಗೊಳ್ತಿದೆ. ಇದಕ್ಕಾಗಿ 9 ಕೋಟಿ 96 ಲಕ್ಷಕ್ಕೂ ಹೆಚ್ಚು ರೈತರಿಗೆ 73 ಸಾವಿರ ಕೋಟಿ ಹಣ ವರ್ಗಾವಣೆಯಾಗಿದೆ.ಈಗ್ಲೂ ನೋಂದಣಿ ಕಾರ್ಯ ಮುಂದುವರೆದಿದೆ.
ಕಳೆದ ಕೆಲ ತಿಂಗಳಿಂದ ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಈಗ ಮತ್ತೆ ಹೊಸ ನಿಯಮ ಜಾರಿಗೆ ಬಂದಿದ್ದು, ರೈತರಿಗೆ ಹಣ ಪಡೆಯುವುದು ಸುಲಭವಾಗಿದೆ. 2018ರಲ್ಲಿ ಯೋಜನೆ ಶುರುವಾದ ಸಂದರ್ಭದಲ್ಲಿ 2 ಹೆಕ್ಟೆರ್ ಭೂಮಿ ಹೊಂದಿದ ರೈತರಿಗೆ ಮಾತ್ರ ಇದ್ರ ಲಾಭ ಸಿಗ್ತಿತ್ತು. ಆದ್ರೀಗ ಅದಕ್ಕೆ ಯಾವುದೇ ಮಿತಿಯಿಲ್ಲ. .
ಈ ಯೋಜನೆ ಲಾಭ ಪಡೆಯಲು ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆರಂಭದಲ್ಲಿ ದಾಖಲೆ ರೂಪದಲ್ಲಿ ಆಧಾರ್ ನೀಡಬೇಕಿತ್ತು. ನಂತರದ ದಿನಗಳಲ್ಲಿ ಆಧಾರ್ ಅನಿವಾರ್ಯ ಮಾಡಲಾಗಿದೆ. ಈ ಹಿಂದೆ ರೈತರು ಕಚೇರಿಗಳಿಗೆ ಹೋಗಿ ಹೆಸರು ನೋಂದಾಯಿಸಬೇಕಾಗಿತ್ತು. ಆದ್ರೀಗ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ನೋಂದಣಿ ಸೇರಿದಂತೆ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಕಚೇರಿಗೆ ಅಲೆದಾಡಬೇಕಿಲ್ಲ. ಪಿಎಂ ಕಿಸಾನ್ ಪೋರ್ಟಲ್ ಮೂಲಕ ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು.
ಪಿಎಂ ಕಿಸಾನ್ ಯೋಜನೆಯನ್ನು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಲಿಂಕ್ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ತಯಾರಿಸುವುದು ಸುಲಭವಾಗಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ.