ಬೆಂಗಳೂರು: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ನಡೆಸಿದಂತೆಯೇ ವಿದ್ಯುತ್ ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕೃಷಿ ನೀರಾವರಿ ಪಂಪ್ ಸೆಟ್ ಗಳ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ಅಭಿಯಾನ ಕೈಗೊಳ್ಳಲಾಗುತ್ತದೆ. ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಿದರೆ, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ರೈತರೇ ಸ್ವಯಂ ಪ್ರೇರಿತರಾಗಿ ಉಚಿತ ವಿದ್ಯುತ್ ಸೌಲಭ್ಯ ಬಿಟ್ಟು ಕೊಡುವ ಅಭಿಯಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳಿಸಿದರೆ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ ಎಂಬುದನ್ನು ಮನಗಂಡಿರುವ ಸರ್ಕಾರ ರೈತರೇ ಸ್ವಯಂಪ್ರೇರಿತರಾಗಿ ಉಚಿತ ವಿದ್ಯುತ್ ಸೌಲಭ್ಯ ಬಿಟ್ಟು ಕೊಡುವ ಗಿವ್ ಇಟ್ ಅಪ್ ಅಭಿಯಾನ ಕೈಗೊಳ್ಳಲಿದ್ದು, ರೈತರು ಸೌಲಭ್ಯ ತ್ಯಜಿಸಿದಲ್ಲಿ ಅಷ್ಟು ವೆಚ್ಚ ಉಳಿತಾಯವಾಗುತ್ತದೆ ಎನ್ನಲಾಗಿದೆ.
ಗ್ಯಾಸ್ ಸಬ್ಸಿಡಿ ತ್ಯಜಿಸಲು ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲಾಗಿತ್ತು. ಅನೇಕರು ಸಬ್ಸಿಡಿ ತ್ಯಜಿಸಿದ್ದರು. ವರ್ಷಗಳು ಕಳೆದಂತೆ ಗ್ಯಾಸ್ ಸಬ್ಸಿಡಿಯನ್ನೇ ನಿಲ್ಲಿಸಲಾಗಿದ್ದು, ಇದು ಅದೇ ರೀತಿ ಆಗಿ ಉಚಿತ ವಿದ್ಯುತ್ ಸೌಲಭ್ಯ ನಿಲ್ಲಿಸಬಹುದು ಎಂಬ ಆತಂಕ ರೈತರಲ್ಲಿದೆ ಎನ್ನಲಾಗಿದೆ.