
ನವದೆಹಲಿ: ಈ ವರ್ಷದ ಮಾರ್ಚ್ 25 ರವರೆಗೆ ದೇಶದ ಹಾಲಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕ ಕಂಪನಿಗಳಿಗೆ ಸಂಬಂಧಿಸಿದ ಅರ್ಹ ಹೈನುಗಾರರಿಗೆ ಸುಮಾರು 15 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ. ಈ ಕಾರ್ಡ್‌ಗಳು 10,974 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಹೊಂದಿವೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ ಅವರು, ಹೈನುಗಾರರಿಗೆ ಕೆಸಿಸಿ ಒದಗಿಸಲು ಸರ್ಕಾರವು ವಿಶೇಷ ಅಭಿಯಾನವನ್ನು ಸಹ ಆಯೋಜಿಸಿದೆ ಎಂದು ಹೇಳಿದರು.
2021 ರ ಫೆಬ್ರವರಿಯಲ್ಲಿ ಪ್ರತಿ ಕೆಜಿಗೆ 37.38 ರೂಪಾಯಿಗಳಿಂದ 2022 ರ ಫೆಬ್ರವರಿಯಲ್ಲಿ 39.93 ರೂಪಾಯಿಗಳಿಗೆ ರೈತರಿಗೆ ಹಾಲಿನ ಮೊತ್ತ ಪಾವತಿಸುವ ಸರಾಸರಿ ಹಾಲು ಸಂಗ್ರಹಣೆ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು.