![](https://kannadadunia.com/wp-content/uploads/2020/06/14890-invest-gold.jpg)
ರಾಖಿ ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿದೆ. ಎಂಸಿಎಕ್ಸ್ ನಲ್ಲಿ, ಅಕ್ಟೋಬರ್ ವಿತರಣೆಯ ಚಿನ್ನದ ಭವಿಷ್ಯವು 10 ಗ್ರಾಂಗೆ 53,606 ರೂಪಾಯಿಗೆ ವಹಿವಾಟು ನಡೆಸಿದೆ. ಇಂದು ಚಿನ್ನದ ಬೆಲೆ 161 ರೂಪಾಯಿ ಹೆಚ್ಚಳ ಕಂಡಿದೆ. ಇನ್ನು ಬೆಳ್ಳಿ ಶೇಕಡಾ 1ರಷ್ಟು ಹೆಚ್ಚಾಗಿದ್ದು, ಕೆ.ಜಿ ಬೆಳ್ಳಿ ಬೆಲೆ 65,621 ರೂಪಾಯಿಯಾಗಿದೆ.
ಜುಲೈ ತಿಂಗಳಿನಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಸುಮಾರು 5000 ರೂಪಾಯಿ ಹೆಚ್ಚಾಗಿತ್ತು. ಆದ್ರೆ ಬೆಳ್ಳಿ, ಚಿನ್ನದ ದರವನ್ನು ಹಿಂದಿಕ್ಕಿತ್ತು. ಜುಲೈನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 14320 ರೂಪಾಯಿ ಹೆಚ್ಚಾಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತ ದೇಶೀಯ ಚಿನ್ನದ ಬೆಲೆಗಳು ಏರಲು ಕಾರಣವಾಗಿದೆ. ಕೊರೊನಾ ಹೆಚ್ಚಾಗ್ತಿರುವ ಕಾರಣ ಜನರು ಸುರಕ್ಷಿತ ಹೂಡಿಕೆ ಮೇಲೆ ಹೆಚ್ಚಿನ ಹಣ ಹಾಕ್ತಿದ್ದಾರೆ. ಹಾಗಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 53,650 ರೂಪಾಯಿಯಾಗಿದೆ.