ಕೊರೊನಾ, ಆರ್ಥಿಕ ಸಂಕಷ್ಟದ ಮಧ್ಯೆ ಜನರಿಗೆ ಸಾಕಷ್ಟು ಬಂಡವಾಳ ಹಾಕಿ ವ್ಯಾಪಾರ ಶುರು ಮಾಡುವುದು ಕಷ್ಟ. ಅದ್ರಲ್ಲೂ ಮನೆಯಲ್ಲಿರುವ ಮಹಿಳೆಯರಿಗೆ ಬಂಡವಾಳ ಹೊಂದಿಸುವುದು ಕಷ್ಟ. ಅಂತವರಿಗೆ ಈ ಅಪ್ಲಿಕೇಷನ್ ನೆರವಾಗಲಿದೆ.
ಹೆಚ್ಚೆಚ್ಚು ಕಾಂಟೆಕ್ಟ್ ಹೊಂದಿರುವ, ಕಷ್ಟಪಟ್ಟು ಕೆಲಸ ಮಾಡಲು ಬಯಸುವವರಿಗೆ ಈ ಅಪ್ಲಿಕೇಷನ್ ನೆರವಾಗಲಿದೆ. ಈಗ ನಾವು ಹೇಳಲು ಹೊರಟಿರುವ ಅಪ್ಲಿಕೇಷನ್ ಹೆಸರು Meesho. ಯಸ್, ಈ ಅಪ್ಲಿಕೇಷನನ್ನು ನೀವು ಮೊಬೈಲ್ ನಲ್ಲಿ ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕು. ಅಲ್ಲಿ ಕೇಳುವ ಮಾಹಿತಿಯನ್ನು ನಮೂದಿಸಬೇಕು. ನಂತ್ರ ನಿಮ್ಮ ವ್ಯಾಪಾರ ಶುರು ಮಾಡಬಹುದು.
ಮೀಶೋ ಒಂದು ಇ-ಮಾರ್ಕೆಟಿಂಗ್ ಕಂಪನಿಯಾಗಿದೆ. ಅಮೆಜಾನ್, ಫ್ಲಿಪ್ಕಾರ್ಟ್ ನಂತೆ ಇದ್ರಲ್ಲೂ ಬಟ್ಟೆ, ಮನೆ ವಸ್ತುಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಲಭ್ಯವಿದೆ. ಇದ್ರಲ್ಲಿ ಸೈನ್ ಇನ್ ಆದ ಗ್ರಾಹಕರು ಈ ವೆಬ್ ಸೈಟ್ ಮೂಲಕ ವಸ್ತುಗಳನ್ನು ಮಾರಾಟ ಮಾಡಬಹುದು. ಅಪ್ಲಿಕೇಷನ್ ನಲ್ಲಿರುವ ವಸ್ತುಗಳನ್ನೇ ಮಾರಾಟ ಮಾಡಬೇಕಾಗುತ್ತದೆ. ಹಾಗೆ ಡಿಲೆವರಿ ಚಿಂತೆಯಿಲ್ಲ. ಗ್ರಾಹಕರಿಂದ ಆರ್ಡರ್ ಪಡೆದು ಕಂಪನಿಗೆ ಆರ್ಡರ್ ನೀಡಿದ್ರೆ ಆಯ್ತು. ಮೀಶೋ ಒಂದು ಡ್ರೆಸ್ ಗೆ ಅದ್ರ ಬೆಲೆ ನಿಗದಿಪಡಿಸುತ್ತದೆ. ವ್ಯಾಪಾರಸ್ಥರು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಹೆಚ್ಚುವರಿ ಹಣ ಗ್ರಾಹಕರ ಖಾತೆ ಸೇರುತ್ತದೆ.
ಇದ್ರಲ್ಲಿ ಮೊದಲೇ ಹೇಳಿದಂತೆ ಡಿಲೆವರಿ ಚಿಂತೆಯಿಲ್ಲ. ಗ್ರಾಹಕರಿಗೆ ಇಷ್ಟವಾಗದ ವಸ್ತುವನ್ನು ಮರುಪಾವತಿಸುವ ಅವಕಾಶವೂ ಇದೆ. ಮನೆಯಲ್ಲೇ ಕುಳಿತು ಸಣ್ಣ ವ್ಯಾಪಾರ ಶುರುಮಾಡುತ್ತೇನೆನ್ನುವವರಿಗೆ ಇದು ಬೆಸ್ಟ್. ಪಾರ್ಟ್ ಟೈಂ ರೂಪದಲ್ಲಿ ಕೂಡ ಇದನ್ನು ಶುರು ಮಾಡಬಹುದು. ಇಷ್ಟೇ ಅಲ್ಲ ಬೇರೆಯವರನ್ನು ನೀವು ರೆಫರ್ ಮಾಡಿದ್ರೆ ಕೂಡ ನಿಮಗೆ ಹಣ ಸಿಗುತ್ತದೆ. 12 ತಿಂಗಳಲ್ಲಿ 50 ಸಾವಿರದವರೆಗೆ ರೆಫರ್ ಮಾಡಿ ಗಳಿಸಬಹುದೆಂದು ಕಂಪನಿ ಹೇಳಿದೆ. ನೀವು ರೆಫರ್ ಮಾಡಿದ ವ್ಯಕ್ತಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಗಳಿಕೆ ಶುರು ಮಾಡಿದ್ರೆ ನಿಮಗೆ ಶೇಕಡಾವಾರು ಲೆಕ್ಕದಲ್ಲಿ ಹಣ ಸಿಗುತ್ತದೆ.