ಪಾರ್ಟ್ ಟೈಂ, ಫುಲ್ ಟೈಂ ಸೇರಿದಂತೆ ಮನೆಯಲ್ಲೇ ಮಾಡುವ ವ್ಯಾಪಾರದ ಬಗ್ಗೆ ಜನರ ಹುಡುಕಾಟ ಹೆಚ್ಚಾಗಿದೆ. ಇದಕ್ಕೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಹಾಕ್ತಿದ್ದಾರೆ.
ಆದ್ರೆ ಎಲ್ಲವೂ ಹಣ ಬರುವಂತಹದ್ದಲ್ಲ. ಕೆಲವರು ಕೆಲಸ ಮಾಡಿಸಿಕೊಂಡು ಕೈ ಕೊಟ್ರೆ ಮತ್ತೆ ಕೆಲವರು ಮೊದಲೇ ಹಣ ಪಡೆದು ಮೋಸ ಮಾಡ್ತಾರೆ. ಆದ್ರೆ ಗೂಗಲ್ ಪ್ರಸಿದ್ಧ ಕಂಪನಿ. ಇದನ್ನು ನಂಬಿ ಮೊಬೈಲ್ ನಲ್ಲಿ ಕೆಲಸ ಮಾಡಿ ಹಣ ಗಳಿಸಬಹುದು.
ಗೂಗಲ್ ಫಾರ್ಮ್ ಮೂಲಕ ನೀವು ಹಣ ಗಳಿಸಬಹುದು. ಮೊಬೈಲ್ ನಲ್ಲಿಯೇ ಈ ಕೆಲಸ ಮಾಡಬಹುದು. ಇದು ಆನ್ಲೈನ್ ಸರ್ವೆ ಫಾರ್ಮ್ ಮಾಡುವ ಕೆಲಸ. ಇಂಟರ್ನ್ಯಾಷನಲ್ ಸೈಟ್ ನಲ್ಲಿ ಈ ಕೆಲಸ ಸಿಗುತ್ತದೆ. FIverr ಹೆಸರಿನ ಫ್ರೀ ಲೈನ್ಸ್ ಸೈಟ್ ನಲ್ಲಿ ಮೊದಲು ರಿಜಿಸ್ಟ್ರೇಷನ್ ಮಾಡಬೇಕು. ಈಗಾಗಲೇ ಇದ್ರಲ್ಲಿ ಅನೇಕ ಭಾರತೀಯರು ಕೆಲಸ ಮಾಡ್ತಿದ್ದಾರೆ. ಯುಎಸ್ ಡಾಲರ್ ನಲ್ಲಿ ನಿಮಗೆ ಹಣ ಸಿಗುತ್ತದೆ. ಇದ್ರಲ್ಲಿ ಹೆಸರು ನೋಂದಾಯಿಸಿ ಸರ್ವೆ ಫಾರ್ಮ್ ತಯಾರಿಸಿ ಕೊಡಲಾಗುತ್ತೆ ಅಂತಾ ನೀವು ಜಾಹಿರಾತು ಹಾಕ್ಬೇಕು. ಅನೇಕ ಕಂಪನಿಗಳು ಇದ್ರ ಜೊತೆ ಸಂಪರ್ಕದಲ್ಲಿವೆ. ಅವ್ರಿಗೆ ನೀವು ನೀಡಿದ ಫಾರ್ಮ್ ಜಾಹೀರಾತು ಇಷ್ಟವಾದ್ರೆ ಕಂಪನಿ ನಿಮ್ಮನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಫಾರ್ಮ್ ತಯಾರಿಸಲು ನಿಮಗೆ ಹಣ ನೀಡುತ್ತದೆ. ಅದ್ರಲ್ಲಿ ನೀವು ಒಂದು ಫಾರ್ಮ್ ತಯಾರಿಸಲು ಎಷ್ಟು ಶುಲ್ಕ ತೆಗೆದುಕೊಳ್ತಿರಿ ಎಂದು ನಮೂದಿಸಬೇಕು.
ಸರ್ವೆ ಫಾರ್ಮ್ ತಯಾರಿಸುವುದು ಕೂಡ ಸುಲಭ. ನೀವು ಗೂಗಲ್ ಫಾರ್ಮ್ಸ್ ಮೂಲಕ ನೀವು ಸರ್ವೆ ಫಾರ್ಮ್ ತಯಾರಿಸಬಹುದು. ಮೊಬೈಲ್ ಅಥವಾ ಲ್ಯಾಪ್ ಟಾಪ್ ಎರಡರಲ್ಲೂ ನೀವು ಸರ್ವೆ ಫಾರ್ಮ್ ತಯಾರಿಸಬಹುದು. ಸರ್ವೆ ಫಾರ್ಮ್ ಹೇಗೆ ತಯಾರಿಸಬೇಕು ಹಾಗೆ ಫೀವರ್ ನಲ್ಲಿ ಹೇಗೆ ಜಾಹಿರಾತು ನೀಡಬೇಕು ಎಂಬುದು ನಿಮಗೆ ಯುಟ್ಯೂಬ್ ನಲ್ಲಿ ಮಾಹಿತಿ ಸಿಗುತ್ತದೆ.