ಎಸ್‌ಬಿಐ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಿನ್ನೆಯಿಂದ ಎಸ್‌ಬಿಐ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಎಟಿಎಂ ಮೂಲಕ ನೀವು 10 ಅಥವಾ 10 ಸಾವಿರಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಬೇಕು ಎಂದಾದರೆ ನೀವು ಒಟಿಪಿಯನ್ನು ನೀಡಬೇಕು. ಆ ಒಟಿಪಿ ಖಾತೆಗೆ ಲಿಂಕ್ ಮಾಡಿದ ಮೊಬೈಲ್ ನಂಬರ್‌ಗೆ ಮಾತ್ರ ಬರುತ್ತದೆ. ಹಾಗಾದ್ರೆ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ವಲ್ಲಾ ಅನ್ನೋ ಚಿಂತೆ ಇದ್ದರೆ ಅದನ್ನು ಬಿಟ್ಟುಬಿಡಿ ಸುಲಭ ವಿಧಾನದ ಮೂಲಕ ನೀವು ಮೊಬೈಲ್ ನಂಬರ್ ಲಿಂಕ್ ಮಾಡಬಹುದು.
ಹೌದು, ಒಟ್ಟು ಮೂರು ವಿಧಾನಗಳ ಮೂಲಕ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದು. ಆನ್‌ಲೈನ್ ಮೂಲಕ ಅಥವಾ ಎಟಿಎಂ ಮೂಲಕ ಅಥವಾ ನಿಮ್ಮ ಖಾತೆ ಇರುವ ಬ್ಯಾಂಕ್‌ಗೆ ಹೋಗಿ ಮಾಡಬಹುದು. ನಿಮಗೆ ಬ್ಯಾಂಕ್‌ಗೆ ಹೋಗಿ ನಂಬರ್ ಲಿಂಕ್ ಮಾಡುವುದೇ ಸುಲಭ ಎಂದಾದರೆ ನಿಮ್ಮ ಶಾಖೆಗೆ ಹೋಗಿ ಒಂದು ರಿಕ್ವೆಸ್ಟ್ ಲೆಟರ್ ಅನ್ನು ಕೊಡಬೇಕು. ಎಲ್ಲಾ ದಾಖಲೆ ಸರಿ ಇರೋದನ್ನು ಪರಿಶೀಲಿಸಿ ನಿಮ್ಮ ಮೊಬೈಲ್ ನಂಬರ್ ಅನ್ನು ಬ್ಯಾಂಕ್ ಸಿಬ್ಬಂದಿ ಲಿಂಕ್ ಮಾಡುತ್ತಾರೆ. ನಂತರ ಒಂದು ಕನ್ಫರ್ಮೇಷನ್ ಮೆಸೇಜ್ ಬರುತ್ತದೆ.
ಇನ್ನು ಬ್ಯಾಂಕ್ ಗೆ ಹೋಗಲು ಸಮಯವಿಲ್ಲ ಅಥವಾ ಬ್ಯಾಂಕ್ ದೂರ ಇದೆ ಎಂದಾದರೆ ನೀವು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕವೂ ಲಿಂಕ್ ಮಾಡಬಹುದು. ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕೇಳುವ ನಿಮ್ಮ ಎಲ್ಲಾ ದಾಖಲೆಗಳನ್ನು ನೀಡಿದ ನಂತರ ಮೊಬೈಲ್ ಲಿಂಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂಬರ್ ನಮೂದಿಸಿ ಹೀಗೊಂದು ಪ್ರಕ್ರಿಯೆ ಪೂರ್ಣಗೊಳಿಸಿ ನಂಬರ್ ಲಿಂಕ್ ಮಾಡಬಹುದು. ಇನ್ನು ಎಟಿಎಂನಲ್ಲೂ ನಂಬರ್ ಲಿಂಕ್ ಮಾಡಬಹುದು.