ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ, ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸೇವೆಗಳ ನಿಯಮಗಳನ್ನು ಬದಲಾಯಿಸಿದೆ. ಕಂಪನಿಗಳು ಪೂರ್ವನಿಯೋಜಿತವಾಗಿ ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸಕ್ರಿಯಗೊಳಿಸಲು ಸಾಧ್ಯವಿಲ್ಲ. ಈ ಸೇವೆಯನ್ನು ಬಳಕೆದಾರರ ಬೇಡಿಕೆಯ ಮೇರೆಗೆ ಮಾತ್ರ ನೀಡಬೇಕು.
ಗ್ರಾಹಕರು ರೋಮಿಂಗ್ ಸಕ್ರಿಯಗೊಳಿಸುವಂತೆ ಹೇಳಿದ್ರೆ ಕಂಪನಿಗಳು ಸಕ್ರಿಯಗೊಳಿಸಬೇಕು. ಅವ್ರ ಕೋರಿಕೆ ಮೇರೆಗೆ ನಿಷ್ಕ್ರಿಯಗೊಳಿಸಬಹುದು. ಟ್ರಾಯ್ ನಿಯಮದಂತೆ ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸಕ್ರಿಯಗೊಂಡ ತಕ್ಷಣ ಟೆಲಿಕಾಂ ಕಂಪನಿಯು ಗ್ರಾಹಕರಿಗೆ ತಿಳಿಸಬೇಕಾಗುತ್ತದೆ.
ಎಸ್ಎಂಎಸ್, ಇ-ಮೇಲ್ ಅಥವಾ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಗ್ರಾಹಕರಿಗೆ ಸೇವೆ ಸಕ್ರಿಯಗೊಂಡ ಬಗ್ಗೆ ಹಾಗೂ ಸುಂಕಗಳ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಗ್ರಾಹಕರಿಗೆ ಅಂತರರಾಷ್ಟ್ರೀಯ ರೋಮಿಂಗ್ ನಿಂದ ಬರ್ತಿದ್ದ ದುಬಾರಿ ಬಿಲ್ ಆಘಾತವನ್ನು ತಪ್ಪಿಸಲು ಟ್ರಾಯ್ ಈ ಕ್ರಮ ತೆಗೆದುಕೊಂಡಿದೆ. ಮೊಬೈಲ್ನ ಪೋಸ್ಟ್ ಪೇಯ್ಡ್ ಸಂಪರ್ಕವನ್ನು ಬಳಸುತ್ತಿದ್ದರೆ, ಬಿಲ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.
ರೋಮಿಂಗ್ ಶುಲ್ಕದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಜಿಯೋ, ಏರ್ಟೆಲ್, ವೋಡಾಫೋನ್ ಗೆ ಟ್ರಾಯ್ ಹೇಳಿದೆ. ವಿಮಾನದಲ್ಲಿ ಕನೆಕ್ಟಿವಿಟಿ ನೀಡುವುದಾಗಿ ಜಿಯೋ ಈ ಹಿಂದೆ ಹೇಳಿತ್ತು.