ಸರ್ಕಾರಿ ತೈಲ ಕಂಪನಿಗಳು ನವೆಂಬರ್ 1ರಿಂದ ಜಾರಿಗೆ ಬರಬೇಕಾಗಿದ್ದ ವಿತರಣಾ ದೃಢೀಕರಣ ಕೋಡನ್ನು ಮುಂದೂಡಿವೆ. ಇದ್ರಿಂದ ಕೆಲವರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಈಗ್ಲೂ ಗ್ಯಾಸ್ ಕನೆಕ್ಷನ್, ಮೊಬೈಲ್ ನಂಬರ್ ಜೊತೆ ಲಿಂಕ್ ಆಗಿಲ್ಲವೆಂದಾದ್ರೆ ಚಿಂತೆಪಡುವ ಅಗತ್ಯವಿಲ್ಲ. ಈಗಾಗಲೇ ಶೇಕಡಾ 30ರಷ್ಟು ಮಂದಿ ನಂಬರ್ ಲಿಂಕ್ ಮಾಡಿದ್ದಾರೆ.
ವಿತರಣಾ ದೃಢೀಕರಣ ಕೋಡನ್ನು ಗ್ರಾಹಕರು ಪಡೆಯಬಹುದು. ಆದ್ರೆ ಇದು ಕಡ್ಡಾಯವಲ್ಲ. ಗ್ರಾಹಕರು ಬಯಸಿದ್ರೆ ಮಾತ್ರ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೂ ನಂಬರ್ ಲಿಂಕ್ ಮಾಡದೆ ಹೋದವರು ಕೂಡ ಸಿಲಿಂಡರ್ ಪಡೆಯಬಹುದು.
ಸಾಮಾನ್ಯವಾಗಿ ಲಿಂಕ್ ಆಗಿರುವ ನಂಬರ್ ಗೆ ಒಟಿಪಿ ಬರುತ್ತದೆ. ಈ ಒಟಿಪಿಯನ್ನು ಡಿಲೆವರಿ ಬಾಯ್ ಗೆ ತೋರಿಸಬೇಕಾಗುತ್ತದೆ. ನಂಬರ್ ಲಿಂಕ್ ಆಗದೆ ಹೋದ್ರೆ ಆನ್ಲೈನ್ ಅಪ್ಲಿಕೇಷನ್ ಮೂಲಕ ನೀವು ಈ ಒಟಿಪಿ ಪಡೆಯಬಹುದು. ಈ ಅಪ್ಲಿಕೇಷನ್ ಡಿಲೆವರಿ ಬಾಯ್ ಬಳಿಯೂ ಇರುತ್ತದೆ. ಈ ಅಪ್ಲಿಕೇಷನ್ ನಲ್ಲಿ ನಂಬರ್ ಜನರೇಟ್ ಮಾಡ್ತಿದ್ದಂತೆ ಒಟಿಪಿ ಸಿಗುತ್ತದೆ.