ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಮೂರು ದಿನಗಳ ಇಳಿಕೆ ನಂತ್ರ ಇಂದು ಬಂಗಾರದ ಬೆಲೆ ಹೆಚ್ಚಾಗಿದೆ. ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 105 ರೂಪಾಯಿ ಏರಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಪ್ರಸ್ತುತ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 105 ರೂಪಾಯಿ ಏರಿಕೆ ಕಂಡಿದ್ದು, 52,731 ರೂಪಾಯಿಯಾಗಿದೆ. ಬೆಳ್ಳಿ ಬೆಲೆ ಕೆ.ಜಿ. ಗೆ 507 ರೂಪಾಯಿ ಏರಿಕೆ ಕಂಡಿದೆ. ಇಂದು ಕೆ.ಜಿ. ಬೆಳ್ಳಿ ಬೆಲೆ 66,256 ರೂಪಾಯಿಯಾಗಿದೆ.