ಪ್ರಧಾನ ಮಂತ್ರಿ ಮುದ್ರಾ ಯೋಜನೆ ಲಾಭ ಕಾರ್ಪೋರೇಟ್ ಅಲ್ಲದ ಸಣ್ಣ, ಸೂಕ್ಷ್ಮ ಉದ್ಯಮಿಗಳಿಗೆ ಸಿಗ್ತಿದೆ. ಇದನ್ನು ಏಪ್ರಿಲ್ 8,2015 ರಲ್ಲಿ ಪ್ರಾರಂಭಿಸಲಾಗಿದೆ. ವ್ಯಾಪಾರವನ್ನು ವಿಸ್ತರಿಸಲು ಬಯಸುವವರು ಇದ್ರಡಿ 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ.
ಸಣ್ಣ ಉದ್ಯಮಿಗಳಿಗೆ ಎಸ್.ಬಿ.ಐ. 59 ನಿಮಿಷದಲ್ಲಿ 10 ಸಾವಿರ ರೂಪಾಯಿಯಿಂದ 10 ಲಕ್ಷದವರೆಗೆ ಸಾಲ ನೀಡುತ್ತದೆ. ಮುದ್ರಾ ಯೋಜನೆಯಡಿ ಮೂರು ರೀತಿಯ ಸಾಲ ಸಿಗಲಿದೆ. ಶಿಶು, ಕಿಶೋರ್ ಹಾಗೂ ತರುಣ್ ಮುದ್ರಾ ಸಾಲ ಸಿಗಲಿದೆ.
ಶಿಶು ಮುದ್ರಾ ಸಾಲವನ್ನು ಸ್ಟಾರ್ಟ್ ಅಪ್ ಅಥವಾ ಸಣ್ಣ ಮಟ್ಟದಲ್ಲಿ ಉದ್ಯಮವನ್ನು ಪ್ರಾರಂಭಿಸುವವರು ಪಡೆಯಬಹುದು. 50 ಸಾವಿರ ರೂಪಾಯಿವರೆಗೆ ಇದರಲ್ಲಿ ಸಾಲ ಸಿಗಲಿದೆ.
ಕಿಶೋರ್ ಮುದ್ರಾ ಯೋಜನೆಯಡಿ 50,000 ರೂಪಾಯಿಗಳಿಂದ 5 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತದೆ. ಇದಕ್ಕಾಗಿ ನೀವು ಶೇಕಡಾ 14 ರಿಂದ 17 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ವ್ಯವಹಾರ ವಿಸ್ತರಣೆಗಾಗಿ ತರುಣ್ ಮುದ್ರಾ ಸಾಲ ಪಡೆಯಬಹುದು. 10 ಲಕ್ಷದವರೆಗೆ ಸಾಲ ಪಡೆಯಬಹುದು. ಇದರಲ್ಲಿ ಶೇಕಡಾ 16 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಾಲ ತೆಗೆದುಕೊಳ್ಳುವ ಮುನ್ನ ನೀವು ಯಾವ ಮುದ್ರಾ ಯೋಜನೆಯಡಿ ಸಾಲ ತೆಗೆದುಕೊಳ್ಳುತ್ತೀರೆಂಬುದನ್ನು ನಿರ್ಧರಿಸಿ. https://www.mudra.org.in/ ಕ್ಲಿಕ್ ಮಾಡಿ ಇಲ್ಲಿ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಮುದ್ರಾ ಸಾಲ ಸಿಕ್ತಿಲ್ಲವೆಂದ್ರೆ ನೀವು ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬೇಕು. ಬೇರೆ ಬೇರೆ ರಾಜ್ಯಕ್ಕೆ ಬೇರೆ ನಂಬರ್ ನೀಡಲಾಗಿದೆ. 18001801111 ಅಥವಾ 1800110001 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮುದ್ರಾ ಸಾಲ ತೆಗೆದುಕೊಳ್ಳಲು, ಗುರುತಿನ ಚೀಟಿ, ಮನೆ ವಿಳಾಸ, ಬ್ಯಾಂಕ್ ದಾಖಲೆ, ಫೋಟೋ, ವ್ಯವಹಾರದ ಗುರುತಿನ ಚೀಟಿ ಅಗತ್ಯವಿದೆ. ಇದಲ್ಲದೆ, ಜಿಎಸ್ಟಿ ಗುರುತಿನ ಸಂಖ್ಯೆ, ಆದಾಯ ತೆರಿಗೆ ರಿಟರ್ನ್ ಬಗ್ಗೆ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ.