ಕಳೆದ ಕೆಲವು ದಿನಗಳಿಂದ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಮಧ್ಯೆ ಗೃಹಬಳಕೆಯ ಸಿಲಿಂಡರ್ ದರವೂ ಸಹ ಮುಗಿಲು ಮುಟ್ಟಿರುವುದು ಜನಸಾಮಾನ್ಯರು ತತ್ತರಗೊಳ್ಳುವಂತೆ ಮಾಡಿದೆ. ಸೋಮವಾರ ಎಲ್ಪಿಜಿ ಸಿಲಿಂಡರ್ ದರ ಮತ್ತೆ 25 ರೂ. ಏರಿಕೆಯಾಗಿದ್ದು, ಕೇವಲ 3 ತಿಂಗಳ ಅವಧಿಯಲ್ಲಿ ಒಟ್ಟಾರೆ 225 ರೂ. ಹೆಚ್ಚಳವಾದಂತಾಗಿದೆ.
ಇದರ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಸಬ್ಸಿಡಿಯೂ ಸಹ ಸ್ಥಗಿತಗೊಂಡಿದ್ದು, ಇಂದಿನ ದುಬಾರಿ ದುನಿಯಾದಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ದುಸ್ತರವಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜನಸಾಮಾನ್ಯರು ಕಂಗಾಲಾಗುವಂತೆ ಆಗಿದೆ.
ಸ್ವಂತ ‘ಸೂರು’ ಹೊಂದುವ ಕನಸು ಕಂಡವರಿಗೆ SBI ನಿಂದ ಸಿಹಿ ಸುದ್ದಿ
ಇತ್ತ ಪೆಟ್ರೋಲ್ – ಡೀಸೆಲ್ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಸಹ ಮುಗಿಲು ಮುಟ್ಟಿದ್ದು, ಹೀಗಾಗಿಯೇ ತೈಲ ದರವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಒಂದೊಮ್ಮೆ ಈ ಕ್ರಮಕ್ಕೆ ಮುಂದಾದರೆ ಜನಸಾಮಾನ್ಯರು ಒಂದಷ್ಟು ಸಮಾಧಾನದ ನಿಟ್ಟುಸಿರು ಬಿಡಬಹುದಾಗಿದೆ.