ಆಗಸ್ಟ್ 15 ರಂದು ನರೇಂದ್ರ ಮೋದಿಯವರ ಭಾಷಣ ಇಡೀ ದೇಶದ ಜನತೆಯನ್ನು ಸೆಳೆದಿತ್ತು. ಮಹಿಳೆಯರ ಮುಟ್ಟಿನ ಸಮಸ್ಯೆ ಕುರಿತಾಗಿ ಮಾತನಾಡಿದ್ದ ಅವರನ್ನು ಇಡೀ ಮಹಿಳಾ ಸಮುದಾಯ ಕೊಂಡಾಡಿತ್ತು. ಅಂದು ಮಾತು ಕೊಟ್ಟಂತೆ ಇಂದು ಆ ಮಾತನ್ನು ನಡೆಸಿಕೊಟ್ಟಿದ್ದಾರೆ ಪ್ರಧಾನಮಂತ್ರಿ.
ಹೌದು, ಸ್ಯಾನಿಟರಿ ಪ್ಯಾಡ್ನ ಬೆಲೆಯಲ್ಲಿ ಇದೀಗ ಇಳಿಕೆಯಾಗಿದೆ. ಮೋದಿ ಮಾತು ಕೊಟ್ಟಂತೆ ಒಂದು ರೂಪಾಯಿಗೆ ನ್ಯಾಪ್ಕಿನ್ ಇನ್ಮುಂದೆ ಸಿಗಲಿದೆ. ಇಂದಿನಿಂದ ಭಾರತದ ಎಲ್ಲಾ ಜನ ಔಷಧಿ ಕೇಂದ್ರದಲ್ಲಿ ಒಂದು ರೂಪಾಯಿಗೆ ನ್ಯಾಪ್ಕಿನ್ ಲಭ್ಯವಾಗುತ್ತಿವೆ.
ಇಷ್ಟು ದಿನ ನಾಲ್ಕು ನ್ಯಾಪ್ಕಿನ್ ಇರುವ ಒಂದು ಸೆಟ್ಗೆ 10 ರೂಪಾಯಿ ಆಗುತ್ತಿತ್ತು. ಅಂದರೆ ಒಂದು ನ್ಯಾಪ್ಕಿನ್ಗೆ 2.50 ರೂಪಾಯಿ ಇತ್ತು. ಆದರೆ ಇದೀಗ ನಾಲ್ಕು ರೂಪಾಯಿಗೆ ನ್ಯಾಪ್ಕಿನ್ ಪ್ಯಾಕ್ ಲಭ್ಯವಾಗಲಿದೆ. ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಇದರ ಬೆಲೆಯನ್ನು ಇಳಿಸಲಾಗಿದೆ.