ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದ ಮಹಿಳೆಯರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಪಿಎನ್‌ಬಿ ಈ ಬಾರಿ ಮಹಿಳೆಯರಿಗಾಗಿ ಪವರ್ ಸೇವಿಂಗ್ ಖಾತೆ ಸೌಲಭ್ಯವನ್ನು ಜಾರಿಗೆ ತಂದಿದೆ. ಇದ್ರಲ್ಲಿ ಖಾತೆ ತೆರೆಯುವ ಮೂಲಕ ಅನೇಕ ವಿಶೇಷ ಯೋಜನೆಗಳ ಲಾಭವನ್ನು ಮಹಿಳೆಯರು ಪಡೆಯಬಹುದು.
ಪಿಎನ್‌ಬಿ ಬ್ಯಾಂಕ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಪವರ್ ಸೇವಿಂಗ್ ಖಾತೆ ಮಹಿಳೆಯರಿಗಾಗಿ ಶುರುವಾಗಿದೆ. ಜಂಟಿ ಖಾತೆ ಕೂಡ ತೆರೆಯಬಹುದು. ಆದ್ರೆ ಮೊದಲ ಹೆಸರು ಮಹಿಳೆಯದ್ದಾಗಿರಬೇಕೆಂದು ಬ್ಯಾಂಕ್ ಹೇಳಿದೆ.
ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿಗೆ, ಅರೆ ನಗರದಲ್ಲಿ ಸಾವಿರ ರೂಪಾಯಿಗೆ ಹಾಗೂ ನಗರ ಪ್ರದೇಶದಲ್ಲಿ 2 ಸಾವಿರ ರೂಪಾಯಿಗೆ ಖಾತೆ ತೆರೆಯಬಹುದು.
ಈ ಖಾತೆಯಲ್ಲಿ 50 ವರ್ಷಗಳ ಚೆಕ್ಬುಕ್ ಉಚಿತವಾಗಿ ಪಡೆಯಬಹುದು. ಇದಲ್ಲದೆ, ನೆಫ್ಟ್ ಸೌಲಭ್ಯವು ಉಚಿತ. ಪ್ಲ್ಯಾಟಿನಮ್ ಡೆಬಿಟ್ ಕಾರ್ಡ್ ಉಚಿತವಾಗಿ ಸಿಗಲಿದೆ. ಉಚಿತ ಎಸ್‌ಎಂಎಸ್ ಸೌಲಭ್ಯ ಸಿಗಲಿದೆ. ಆಕ್ಸಿಡೆಂಟಲ್ ಡೆತ್ ಇನ್ಶುರೆನ್ಸ್ 5 ಲಕ್ಷ ರೂಪಾಯಿಗಳವರೆಗೆ ಸಿಗಲಿದೆ. ದಿನಕ್ಕೆ 50 ಸಾವಿರ ರೂಪಾಯಿಗಳವರೆಗೆ ಹಣವನ್ನು ವಿತ್ ಡ್ರಾ ಮಾಡಬಹುದು.