ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ತಿನ್ನಲು ಕೊಟ್ಟ ಪದಾರ್ಥಗಳನ್ನು ಮನೆಯ ಎಲ್ಲೆಂದರಲ್ಲಿ ಚೆಲ್ಲುವುದು ಮಾಡುತ್ತಿರುತ್ತಾರೆ. ಇದರಿಂದ ಮನೆಯ ಒಳಗಡೆ ಕೆಟ್ಟ ರೀತಿಯ ವಾಸನೆ ಬರುತ್ತಿರುತ್ತದೆ. ಇನ್ನು ಕೆಲವರು ಮನೆಯ ಒಳಗಡೆ ಕೆಲವೊಂದು ಪ್ರಾಣಿಗಳನ್ನು ಇಟ್ಟುಕೊಂಡು ಸಾಕುತ್ತಾರೆ. ಇವುಗಳು ಸೋಪಾ, ಮಂಚದ ಮೇಲೆ ಓಡಾಡುತ್ತಿರುತ್ತವೆ. ಇದರಿಂದ ಕೂಡ ವಾಸನೆ ಬರುತ್ತಿರುತ್ತದೆ. ಇದನ್ನು ನಿವಾರಿಸಿ ಮನೆಯೆಲ್ಲಾ ಸುಗಂಧಮಯವಾಗಿರಿಸಲು ಇಲ್ಲಿದೆ ಒಂದು ಟಿಪ್ಸ್.
1 ಸ್ಪ್ರೇ ಬಾಟಲ್ ತೆಗೆದುಕೊಳ್ಳಿ. ಬಾಟಲ್ ಕ್ಲೀನ್ ಆಗಿರಲಿ. ಅದಕ್ಕೆ 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಹಾಕಿ ಹಾಗೇ 2 ಕಪ್ ಉಗುರು ಬೆಚ್ಚಗಿನ ನೀರು ಸೇರಿಸಿ ಮುಚ್ಚಳ ಮುಚ್ಚಿ ಅಲ್ಲಾಡಿಸಿ. ಬೇಕಿಂಗ್ ಸೋಡಾ ಚೆನ್ನಾಗಿ ನೀರಿನಲ್ಲಿ ಕರಗಲಿ.
ನಂತರ ಈ ನೀರಿಗೆ 10 ಹನಿ ಲ್ಯಾವೆಂಡರ್ ಆಯಿಲ್ ಸೇರಿಸಿ. ಅಥವಾ ನಿಮಗಿಷ್ಟವಾದ ಇನ್ಯಾವುದರೋ ಸುಗಂಧಯುಕ್ತವಾದ ಆಯಿಲ್ ಸೇರಿಸಿಕೊಳ್ಳಿ. ನಂತರ ಇದನ್ನು ನಿಮ್ಮ ಮನೆಯ ಒಳಗಡೆ ಸ್ಪ್ರೇ ಮಾಡಿ. ಹಾಗೇ, ದಿಂಬು, ಕಟರ್ನ್, ಸೋಪಾಕ್ಕೆ ಸ್ಪ್ರೇ ಮಾಡಿ. ಇದರಿಂದ ಮನೆಯಲ್ಲಾ ಘಂ ಎನ್ನುತ್ತಿರುತ್ತದೆ. ಯಾವುದೇ ರಾಸಾಯನಿಕಗಳು ಇರಲ್ಲ ಹಾಗಾಗಿ ಕಡಿಮೆ ಖರ್ಚಿನಲ್ಲಿ ಆಗುತ್ತದೆ.