ಆನ್ ಲೈನ್ ನಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ, ಲಾಕ್ ಡೌನ್ ಸಂದರ್ಭದಲ್ಲಿ ಖಾಲಿ ಕುಳಿತಿರುವ ಜನರು ಆನ್ ಲೈನ್ ನಲ್ಲಿ ಹಣ ಗಳಿಸುವ ವಿಧಾನ ಹುಡುಕುತ್ತಿದ್ದಾರೆ. ಅವ್ರಿಗೆ ಇಲ್ಲೊಂದಿಷ್ಟು ಬೆಸ್ಟ್ ಐಡಿಯಾ ಇದೆ.
ಗೂಗಲ್ ಗಳಿಕೆಗೆ ಅವಕಾಶ ನೀಡ್ತಿದೆ. ಗೂಗಲ್ ನಲ್ಲಿ ಪ್ರತಿ ದಿನ 100ರಿಂದ 150 ಡಾಲರ್ ಗಳಿಸುವವರಿದ್ದಾರೆ. ಇದ್ರಲ್ಲಿ ಬ್ಲಾಗಿಂಗ್ ಒಂದು. ಬರೆಯುವ ಹವ್ಯಾಸವಿರುವವರು ಈ ಬ್ಲಾಗಿಂಗ್ ಮೂಲಕ ಸಾಕಷ್ಟು ಗಳಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಲಾಗರ್ ಗಳ ಸಂಖ್ಯೆ ಹೆಚ್ಚಾಗಿದೆ. ಕೇವಲ 10 ನಿಮಿಷದಲ್ಲಿ ಬ್ಲಾಗಿಂಗ್ ಸಿದ್ಧಪಡಿಸಿ ನೀವು ಬ್ಲಾಗ್ ಬರೆಯಬಹುದು.
ಇನ್ನೊಂದು ಯುಟ್ಯೂಬ್ ಚಾನೆಲ್. ಇದು ಇತ್ತೀಚಿಗೆ ಪ್ರಸಿದ್ಧಿ ಪಡೆಯುತ್ತಿದೆ. ಇಂಟರ್ನೆಟ್ ವೇಗವಾಗಿರುವ ಕಾರಣ ಎಲ್ಲರೂ ಯುಟ್ಯೂಬ್ ನೋಡಲು ಇಷ್ಟಪಡ್ತಾರೆ. ನಿಮಗೆ ಆಸಕ್ತಿಯಿರುವ ಯುಟ್ಯೂಬ್ ಚಾನೆಲ್ ಶುರು ಮಾಡಬಹುದು. ಜನರು ಹೆಚ್ಚೆಚ್ಚು ನಿಮ್ಮ ಚಾನೆಲ್ ವೀಕ್ಷಣೆ ಮಾಡಿದಂತೆ, ಸಬ್ಸ್ಕ್ರೈಬ್ ಮಾಡಿದಂತೆ ನಿಮಗೆ ಗೂಗಲ್ ಹಣ ನೀಡುತ್ತದೆ.
ಇನ್ನೊಂದು ಗೂಗಲ್ ಆಡ್ಸೆನ್ಸ್ ಮೂಲಕ ಗೂಗಲ್ ಮಾತ್ರವಲ್ಲ ನಿಮಗೂ ಹಣ ಗಳಿಸುವ ಅವಕಾಶ ನೀಡುತ್ತದೆ. ಇದು ಪ್ರತಿ ಕ್ಲಿಕ್ ಮಾದರಿ ಅನುಸರಿಸುತ್ತದೆ. ಬಳಕೆದಾರರು ನಿಮ್ಮ ಸೈಟ್ ನಿಂದ ಜಾಹಿರಾತು ಕ್ಲಿಕ್ ಮಾಡಿದಾಗಲೆಲ್ಲ ಒಂದು ಮೊತ್ತ ನಿಮ್ಮ ಖಾತೆ ಸೇರುತ್ತದೆ. ನಿಮ್ಮ ಬ್ಲಾಗ್ ಅಥವಾ ಯುಟ್ಯೂಬ್ ಚಾನೆಲ್ ಗೆ ನೀವಿದನ್ನು ಲಿಂಕ್ ಮಾಡಬೇಕು. ಇದ್ಯಾವುದಕ್ಕೂ ನೀವು ಹಣ ನೀಡಬೇಕಾಗಿಲ್ಲ. ಹಾಗೆ ಗೂಗಲ್ ಯಾವುದೇ ಮೋಸ ಮಾಡುವುದಿಲ್ಲ. ಆನ್ ಲೈನ್ ನಲ್ಲಿ ಕೆಲಸ ಮಾಡಿ ಕೊನೆಯಲ್ಲಿ ಹಣ ನೀಡದವರ ಸಾಲಿನಲ್ಲಿ ಗೂಗಲ್ ಬರುವುದಿಲ್ಲ.
ಇದಲ್ಲದೆ ನೀವು fiverr ವೆಬ್ ಸೈಟ್ ನಲ್ಲಿ ಕಮೆಂಟ್ ಮಾಡುವ ಮೂಲಕ ಹಣ ಗಳಿಸಬಹುದು. ಭಾರತೀಯ ಭಾಷೆಯಲ್ಲಿಯೂ ಕಮೆಂಟ್ ಮಾಡಿ ಹಣ ಗಳಿಸಬಹುದು. ಇದಕ್ಕೆ ವಿದ್ಯಾರ್ಹತೆಯ ಅವಶ್ಯಕತೆಯಿಲ್ಲ.
ಆನ್ ಲೈನ್ ನಲ್ಲಿ ಇನ್ನೂ ಅನೇಕ ಫ್ರೀ ಲೈನ್ಸ್ ಜಾಬ್ ನೀಡುವ ವೆಬ್ಸೈಟ್ ಗಳು ಸಿಗ್ತವೆ. ಅವುಗಳಲ್ಲಿ ನಿಮ್ಮ ಹೆಸರು ನೋಂದಾಯಿಸಿ ನೀವು ಹಣ ಗಳಿಸಬಹುದು.