ಕೊರೊನಾ ಇಡೀ ಜಗತ್ತಿನ ಜೀವನ ಶೈಲಿಯನ್ನು ಬದಲಿಸಿದೆ. ಈಗ ವರ್ಕ್ ಫ್ರಂ ಹೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಆನ್ಲೈನ್ ಕೆಲಸ ಮಾಡುವವರಿಗೆ ಬೇಡಿಕೆ ಬಂದಿದೆ. ಶಾಲೆ-ಕಾಲೇಜುಗಳು ಕಳೆದ 5 ತಿಂಗಳಿಂದ ಮುಚ್ಚಿದ್ದು, ಶಾಲಾ ಶಿಕ್ಷಣ ಕೂಡ ಆನ್ಲೈನ್ ನಲ್ಲಿಯೇ ನಡೆಯುತ್ತಿದೆ. ಮನೆಯಲ್ಲೇ ಕುಳಿತು ಆನ್ಲೈನ್ ನಲ್ಲಿ ಗಳಿಕೆ ಮಾಡುವ ಅವಕಾಶಗಳನ್ನು ನಾವಿಂದು ಹೇಳ್ತೆವೆ.
ಆನ್‌ಲೈನ್ ಶಿಕ್ಷಕರಾಗಿ ನೀವು ಕೆಲಸ ಮಾಡಬಹುದು. ಇದ್ರಲ್ಲಿ ಪ್ರಾರಂಭಿಕ ಸಂಬಳವಾಗಿ ಸರಾಸರಿ 20,000 ರೂಪಾಯಿ ಗಳಿಸಬಹುದು. ಅನುಭವಿ ಶಿಕ್ಷಕರಿಗೆ ತಿಂಗಳಿಗೆ 50,000 ರೂಪಾಯಿ ಸಿಗುತ್ತದೆ. ಆನ್ಲೈನ್ ನಲ್ಲಿ ಕಲಿಸಲು ಉತ್ತಮ ಗುಣಮಟ್ಟದ ವೆಬ್ ಕ್ಯಾಮೆರಾ ಮತ್ತು ವಿಷಯದ ಬಗ್ಗೆ ಪರಿಣತಿ ಬೇಕಾಗುತ್ತದೆ. Vedantu, BharatTutor ಮತ್ತು Tutor India ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗದ ಅವಕಾಶ ನೀಡ್ತಿವೆ.
Eduwizards.com, Tutorvista.com, Chegg. com, Myschoolpage.com ಮತ್ತು Amazetutors. Com ಮೂಲಕ ನೀವು ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮಕ್ಕಳಿಗೆ ಶಿಕ್ಷಣ ಕಲಿಸಬಹುದು. ಇಲ್ಲಿ ಉದ್ಯೋಗ ಪಡೆಯಲು ಪದವಿ ಅಗತ್ಯ. ಕೆಲವು ಕಂಪನಿಗಳು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಜೋಡಿಸುವ ಕೆಲಸ ಮಾತ್ರ ಮಾಡುತ್ತದೆ. ಅಂದ್ರೆ ನೀವು ಒಬ್ಬ ವಿದ್ಯಾರ್ಥಿಗೆ ಕಲಿಸಲು ನೀವೇ ರೇಟ್ ಫಿಕ್ಸ್ ಮಾಬಹುದು. ಕೆಲ ಕಂಪನಿಗಳು ಸಂಬಳವನ್ನು ನಿಗಧಿಪಡಿಸಿರುತ್ತವೆ. ಒಂದು ಗಂಟೆಗೆ 200-2000 ಸಾವಿರ ಗಳಿಕೆಗೆ ಅವಕಾಶವಿದೆ. ಐದು ವರ್ಷದ ಅನುಭವವಿರುವ ಶಿಕ್ಷಕರು ಗಂಟೆಗೆ 550 ರೂಪಾಯಿ ಪಡೆಯುತ್ತಾರೆ.
ಇಂಗ್ಲೀಷ್, ಗಣಿತ, ಭೌತಶಾಸ್ತ್ರ ಸೇರಿದಂತೆ ವಿಶೇಷ ವಿಷ್ಯದಲ್ಲಿ ಜ್ಞಾನ ಹೊಂದಿರದೆ ಕಲೆ-ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ನಿಮ್ಮಲ್ಲಿ ಜ್ಞಾನವಿದ್ದರೂ ನೀವು ಆನ್ಲೈನ್ ಮೂಲಕ ಮಕ್ಕಳಿಗೆ ಕಲಿಸಬಹುದು. ಡ್ರಾಯಿಂಗ್, ಯೋಗ, ಕರಕುಶಲ, ಡಾನ್ಸ್ ಈ ಎಲ್ಲ ಕ್ಷೇತ್ರಗಳೂ ಈಗ ಆನ್ಲೈನ್ ಆಗ್ತಿವೆ.