
ಮನೆಯಲ್ಲೇ ಕುಳಿತು ಸಾಕಷ್ಟು ಕೆಲಸಗಳನ್ನು ಮಾಡಬಹುದು. ಸಾಮಾಜಿಕ ಮಾಧ್ಯಮಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮ ನಿರ್ವಹಣೆ ಕೆಲಸ ಮಾಡಿ ಕೈ ತುಂಬ ಸಂಪಾದನೆ ಮಾಡಬಹುದು.
ಸಾಮಾಜಿಕ ಮಾಧ್ಯಮ ನಿರ್ವಹಣೆ ಕೆಲಸ ಮಾಡಿ 1.1 ಲಕ್ಷ ರೂಪಾಯಿ ತಿಂಗಳಿಗೆ ಗಳಿಕೆ ಮಾಡಬಹುದು. ಆನ್‌ಲೈನ್ ಜಾಹೀರಾತು ಮತ್ತು ಮಾರ್ಕೆಟಿಂಗ್ ಬೆಳವಣಿಗೆ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಸಾಮಾಜಿಕ ಮಾಧ್ಯಮ ನಿರ್ವಹಿಸುವ ಜನರಿಗೆ ಬೇಡಿಕೆ ಹೆಚ್ಚಾಗಿದೆ. ಆನ್ಲೈನ್ ಮಾರ್ಕೆಟಿಂಗ್ ತಂತ್ರಜ್ಞಾನದ ಬಗ್ಗೆ ನಿಮಗೆ ಮಾಹಿತಿ ಇಲ್ಲದೆ ಹೋದಲ್ಲಿ ನೀವು ಕೋರ್ಸ್ ಮಾಡಿ ಅದ್ರ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು. Udemy.com, Lynda.com ಮತ್ತು Edx.org ನಂತಹ ವೆಬ್ಸೈಟ್ ಗಳಲ್ಲಿ ಇದ್ರ ಬಗ್ಗೆ ಮಾಹಿತಿ ನೀಡುತ್ತವೆ.
ಗಂಟೆಗಳ ಆಧಾರದ ಮೇಲೆ ಸಂಭಾವನೆ ನೀಡಲಾಗುತ್ತದೆ. ಕೆಲಸ ಆಯ್ಕೆ ಮಾಡಿಕೊಳ್ಳುವ ವೇಳೆ ನೀವು ಚೌಕಾಸಿ ಮಾಡಿ ಹೆಚ್ಚಿನ ಸಂಭಾವನೆ ಪಡೆಯಬಹುದು. ಅನುಭವ ಹೆಚ್ಚಾದಂತೆ ನೀವು ಹೆಚ್ಚು ಡಿಮ್ಯಾಂಡ್ ಮಾಡಬಹುದು.