ಮನಸ್ಸು ಮಾಡಿದ್ರೆ ಮನೆಯಲ್ಲಿ ಕುಳಿತು ಕೈತುಂಬಾ ಗಳಿಕೆ ಮಾಡಬಹುದು. ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೆ ಅಲ್ಲಿ ಹೇಗೆ ಗಳಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು. ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುತ್ತಾರೆ. ನಿಮ್ಮ ಆಸಕ್ತಿ ಕ್ಷೇತ್ರದಲ್ಲಿಯೇ ನೀವು ಮನೆಯಲ್ಲಿ ಕುಳಿತು ಗಳಿಸಬಹುದು. ಇದ್ರಲ್ಲಿ ಫೋಟೋಗ್ರಾಫಿ ಕೂಡ ಒಂದು.
ಸ್ಟಾಕ್ ಫೋಟೋ ಸೈಟ್ ಗಳಿಗೆ ನೀವು ಫೋಟೋ ನೀಡಿ ಹಣ ಗಳಿಸಬಹುದು. ಆರಂಭದ ತಿಂಗಳಲ್ಲಿ ನಿಮ್ಮ ಗಳಿಕೆ 2000-4000 ಇರುತ್ತದೆ. ಆದ್ರೆ ಎರಡು ವರ್ಷಗಳ ನಂತ್ರ ಸುಮಾರು 35 ಸಾವಿರವನ್ನು ನೀವು ಗಳಿಸಬಹುದು.
ಹವ್ಯಾಸವಾಗಿ ನೀವು ಇದನ್ನು ಶುರು ಮಾಡಬಹುದು. ಫೋಟೋಗ್ರಾಫರ್ ಗಳಿಂದ ಫೋಟೋ ಖರೀದಿ ಮಾಡುವ ಅನೇಕ ಕಂಪನಿಗಳಿವೆ. Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ಸೈಟ್ ನಲ್ಲಿ ಫೋಟೋ ಲೈಸೆನ್ಸಿಂಗ್ ಮಾಡಿ ಗಳಿಸಬಹುದು.
ಈ ಕಂಪನಿಗಳ ಮಾನದಂಡವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜೆಪಿಇಜಿಯಲ್ಲಿ ಕನಿಷ್ಠ 4-12 ಮೆಗಾಪಿಕ್ಸೆಲ್ ಫೋಟೋ ಇರಬೇಕು. ಪ್ರತಿ ಡೌನ್ಲೋಡ್ ಗೆ ನಿಮಗೆ ಹಣ ಸಿಗುತ್ತದೆ. ಬೇರೆ ಬೇರೆ ಸೈಟ್ ಗಳಲ್ಲಿ ಇದು ಬೇರೆ ಬೇರೆಯಿರುತ್ತದೆ. Gettyimages ಡೌನ್ಲೋಡ್ ಗೆ ಶೇಕಡಾ 20ರಷ್ಟು ಹಣ ನೀಡಿದ್ರೆ Adobe Stock ಶೇಕಡಾ 33 ಹಾಗೂ Shutterstock ಶೇಕಡಾ 17ರಷ್ಟು ಹಣ ನೀಡುತ್ತದೆ.
ಕೇವಲ ಒಂದು ಸೈಟ್ ಆಯ್ಕೆ ಮಾಡಿಕೊಳ್ಳುವ ಬದಲು ನಾಲ್ಕೈದು ಸೈಟ್ ನಲ್ಲಿ ಬೇರೆ ಬೇರೆ ಫೋಟೋ ಅಪ್ಲೋಡ್ ಮಾಡಿ. ಡೌನ್ಲೋಡ್ ಹೆಚ್ಚಿಸಿಕೊಳ್ಳಲು ಒಳ್ಳೆ ಕೀ ವರ್ಲ್ಡ್ ಜೊತೆ ಫೋಟೋ ಅಪ್ಲೋಡ್ ಮಾಡಿ.