ಅಂಗವಿಕಲರು ಮತ್ತು ವೃದ್ಧರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಅಂಗವಿಕಲರು ಮತ್ತು ವೃದ್ಧರು ಜೀವನ ಪ್ರಮಾಣಪತ್ರ ಪಡೆಯಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಮನೆ ಮನೆಗೆ ಬರಲಿದೆ.
ಇದಕ್ಕಾಗಿ ಪೋಸ್ಟ್ ಮ್ಯಾನ್‌ನನ್ನು ಸಂಪರ್ಕಿಸಬೇಕಾಗುತ್ತದೆ. ಅವರಿಗೆ ಜೀವನ ಪ್ರಮಾಣ ಪತ್ರದ ಬಗ್ಗೆ ತಿಳಿಸಿದ್ರೆ ಪೋಸ್ಟ್‌ಮ್ಯಾನ್ ಸಂಬಂಧಪಟ್ಟ ವ್ಯಕ್ತಿಯ ಮನೆಗೆ ತಲುಪಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ರಚಿಸುತ್ತಾರೆ. ಜೀವನ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ 2014 ರ ನವೆಂಬರ್‌ನಲ್ಲಿ ಜೀವನ್ ಪ್ರಮಾಣ್ ಪೋರ್ಟಲ್ ಪ್ರಾರಂಭಿಸಿದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಪಿಂಚಣಿದಾರರು ಈ ಸೇವೆಯನ್ನು ಪಡೆಯಬಹುದು. ಕರೆ ಮಾಡಿದ ನಂತ್ರ ಪೋಸ್ಟ್ ಮ್ಯಾನ್ ಮನೆಗೆ ಬರುತ್ತಾರೆ. ಕೇವಲ ಐದು ನಿಮಿಷಗಳಲ್ಲಿ ಬಯೋಮೆಟ್ರಿಕ್ ಜೀವನ ಪ್ರಮಾಣಪತ್ರವನ್ನು ನೀಡುತ್ತಾರೆ. ಇದಕ್ಕಾಗಿ ಕೇವಲ 70 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಪಿಂಚಣಿದಾರರು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಇದಲ್ಲದೆ ಪಿಪಿಒ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಅಂಚೆ ಕಚೇರಿಯಲ್ಲಿ ನೀಡಬೇಕಾಗುತ್ತದೆ. ಪೋಸ್ಟ್ ಮ್ಯಾನ್ ಆಧಾರ್ ಮೂಲಕ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ನೀಡುತ್ತಾರೆ. ಪಿಂಚಣಿ ನೀಡುವವರಿಗೆ ಸಂಬಂಧಿಸಿದ ಇಲಾಖೆ ಅಥವಾ ಬ್ಯಾಂಕಿನಲ್ಲಿ ನವೀಕರಿಸಲಾಗುತ್ತದೆ.