ಮನೆಯಲ್ಲಿ ಕೆಲಸ ಮಾಡಲು ಆಸಕ್ತಿಯಿರುವವರಿಗೆ ಸಾಕಷ್ಟು ಅವಕಾಶ ಸಿಗ್ತಿದೆ. ಮನೆಯಲ್ಲೇ ಕುಳಿತು ವರ್ಚುವಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಬಹುದು. ಆರಂಭದಲ್ಲಿ ಪ್ರತಿ ಗಂಟೆಗೆ 250 ರೂಪಾಯಿ ಗಳಿಸಬಹುದು. ಎರಡು ವರ್ಷಗಳ ಅನುಭವದ ನಂತರ ಗಂಟೆಗೆ 800 ರೂಪಾಯಿ ಸಿಗಲಿದೆ.
ವರ್ಚುವಲ್ ಅಸಿಸ್ಟೆಂಟ್ ಗಳು ದೂರದ ಸ್ಥಳಗಳಿಂದಲೇ ಕಂಪನಿಗಳಿಗೆ ಆಡಳಿತಾತ್ಮಕ ಬೆಂಬಲವನ್ನು ನೀಡುತ್ತಾರೆ. ಡೇಟಾ ಎಂಟ್ರಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ನೇಮಕಾತಿಗಳ ವೇಳಾಪಟ್ಟಿ, ವೆಬ್‌ಸೈಟ್ ಮತ್ತು ಬ್ಲಾಗ್ ನಿರ್ವಹಣೆ, ಗ್ರಾಹಕ ಸೇವೆಯನ್ನು ಒದಗಿಸುವುದು ಅವ್ರ ಕೆಲಸವಾಗಿದೆ.
ವರ್ಚುವಲ್ ಅಸಿಸ್ಟೆಂಟ್ ಆಗಲು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಎಂಎಸ್ ಆಫೀಸ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಬಗ್ಗೆ ಜ್ಞಾನ ಹೊಂದಿರಬೇಕು. ಲಿಂಕ್ಡ್‌ಇನ್, UpWork.com ಮತ್ತು Freelancer.com ವೆಬ್‌ಸೈಟ್ ಕೆಲಸ ನೀಡ್ತಿದೆ.
ನೀವು ಮಾಡುವ ಕೆಲಸಕ್ಕೆ ತಕ್ಕ ಸಂಬಳ ಪಡೆಯಬಹುದು. ಗಂಟೆಗೆ 200-350 ರೂಪಾಯಿಗಳನ್ನು ಪಡೆಯಬಹುದು. ಅನುಭವವಿರುವವರು ಗಂಟೆಗೆ ಸಾವಿರ ರೂಪಾಯಿ ಗಳಿಸಬಹುದು.