ಕೊರೊನಾ ವೈರಸ್ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಇಷ್ಟವಿಲ್ಲವೆಂದ್ರೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡ್ಬಹುದು. ಅನೇಕ ಕಂಪನಿಗಳು ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ನೀಡ್ತಿವೆ. ಇಂಟರ್ನ್ ಶಿಪ್ ಕೆಲಸ ಹುಡುಕಲು ನೀವು ವೆಬ್ಸೈಟ್ ಗಳ ಸಹಾಯ ಪಡೆಯಬಹುದು.
ಇಂಟರ್ನ್‌ಶಿಪ್ಗಾಗಿ ನೀವು https://internshala.com ವೆಬ್ಸೈಟ್ ನಲ್ಲಿ ಉದ್ಯೋಗ ಹುಡುಕಬಹುದು. ಇಂಟರ್ನ್‌ಶಿಪ್ ಉದ್ಯೋಗಗಳಿಗೆ ಬಹಳ ಜನಪ್ರಿಯ ತಾಣ ಇದಾಗಿದೆ. ಮನೆಯಲ್ಲಿ ಕುಳಿತು ಇಂಟರ್ನ್ಶಿಪ್ ಕೆಲಸವನ್ನು ಮಾಡಲು ಬಯಸಿದರೆ ಈ ಸೈಟ್ ಗೆ ಹೋಗಿ. ಇಲ್ಲಿ ಕೆಲಸದ ಆಯ್ಕೆ ಸಿಗುತ್ತದೆ. ವರ್ಗ, ಸ್ಥಳ, ಮನೆಯಿಂದ ಕೆಲಸ, ಅರೆಕಾಲಿಕ ಇತ್ಯಾದಿಗಳ ಆಧಾರದ ಮೇಲೆ ಉದ್ಯೋಗ ಹುಡುಕಾಟವನ್ನು ಮಾಡಬಹುದು. ಅರ್ಜಿ ಸಲ್ಲಿಸುವಾಗ ನೀವು ಎಷ್ಟು ಸ್ಟೈಫಂಡ್ ಪಡೆಯುತ್ತೀರಿ ಎಂಬ ಮಾಹಿತಿ ನಿಮಗೆ ಸಿಗಲಿದೆ.
ಇಂಟರ್ನ್ ಶಿಪ್ ಉದ್ಯೋಗಕ್ಕಾಗಿ www.hellointern.comನಲ್ಲಿ ಕೆಲಸ ಹುಡುಕಬಹುದು. ವರ್ಚುವಲ್ ಇಂಟರ್ನ್‌ಶಿಪ್‌ನ ವರ್ಗವು ಮುಖಪುಟದಲ್ಲಿಯೇ ಕಂಡುಬರುತ್ತದೆ. ಅಲ್ಲಿಂದ ನೇರವಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ವೆಬ್ಸೈಟ್ ಗಳಲ್ಲಿ ಕೆಲಸ, ಅದಕ್ಕೆ ನೀಡುವ ಸಂಬಳದ ಮಾಹಿತಿ ನಿಮಗೆ ಲಭ್ಯವಾಗುತ್ತದೆ.