ಒಂದು ಕಡೆ ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದ್ದರೆ, ಮತ್ತೊಂದು ಕಡೆ ಬೆಲೆ ಏರಿಕೆ ಜನರ ಜೀವನವನ್ನು ಹಿಂಡುತ್ತಿದೆ. ಇದರ ಜೊತೆಗೆ ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿರುವುದು ಇಂಧನ ಬೆಲೆ ಏರಿಕೆ. ಹೌದು, ಕಳೆದ ಮೂರು ದಿನಗಳಿಂದ ಬಿಡದೆ ಬೆಲೆ ಏರಿಕೆಯಾಗುತ್ತಲೇ ಇದೆ.
ಹೌದು, ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 12 ಪೈಸೆ ಹೆಚ್ಚಳ ಮಾಡಲಾಗಿದೆ. ನಿನ್ನೆಯೂ ಕೂಡ 16 ಪೈಸೆ ಹೆಚ್ಚಳವಾಗಿತ್ತು. ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೂ ಇಂಧನ ಬೆಲೆ ಏರಿಕೆ ನಿರಂತರವಾಗಿತ್ತು. ಇದೀಗ ಆಗಷ್ಟ್ ತಿಂಗಳಲ್ಲಿ ಇಂಧನ ಬೆಲೆ ಕಡಿಮೆಯಾಗಬಹುದು ಎಂದುಕೊಂಡಿದ್ದ ವಾಹನ ಸವಾರರಿಗೆ ಮತ್ತೆ ನಿರಾಸೆಯುಂಟಾಗಿದ್ದು, ಪೆಟ್ರೋಲ್ ದರ ಏರಿಕೆಯಾಗಿದೆ.
ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಯನ್ನು ಸಾರ್ವಜನಿಕರು ವಿರೋಧಿಸಿಕೊಂಡು ಬಂದಿದ್ದಾರೆ. ಇದೀಗ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಆಗಿದೆ.