ಒಂದು ಕಡೆ ಕೊರೊನಾ ಮತ್ತೊಂದು ಕಡೆ ಆರ್ಥಿಕ ಹೊಡೆತದಿಂದ ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರ ಮಧ್ಯೆ ಚಿನ್ನದ ದರ ಕೂಡ ಪ್ರತಿ ನಿತ್ಯ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಲಾಕ್ಡೌನ್ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಹೌದು, ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 50,900 ಇದೆ. ಈ ಮೂಲಕ 140 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 55,530 ರೂಪಾಯಿ ಆಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಒಂದೇ ದಿನ 160 ರೂಪಾಯಿ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡಿದೆ. ಈ ಮೂಲಕ ಒಂದು ಕೆ.ಜಿ. ಬೆಳ್ಳಿ 65,050 ರೂಪಾಯಿ ಆಗಿದೆ.
ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ ಇನ್ನೂ ಏರಿಕೆ ಕಾಣಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅತ್ತ ಕೊರೊನಾದಿಂದಾಗಿ ಯಾವ ಉದ್ಯಮದ ಮೇಲೂ ಹೂಡಿಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಚಿನ್ನದ ಮೇಲೆಯೇ ಹೂಡಿಕೆಗೆ ವಾಲಿದ್ದಾರೆ.