alex Certify ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ

Important rules regarding children's Aadhaar card, UIDAI gave information  about it - informalnewz

ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸ್ಥಾನ ಪಡೆದಿದೆ. ಆಧಾರ್ ಕಾರ್ಡ್ ಈಗ ಅನಿವಾರ್ಯ ದಾಖಲೆಯಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಲಾಗ್ತಿದೆ. ಮಕ್ಕಳಿಗೂ ಇದನ್ನು ಮಾಡಿಸಬೇಕು. ಮಕ್ಕಳಿಗೆ ಆಧಾರ್ ಮಾಡಿಸುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು.

ನವಜಾತ ಶಿಶುವಿಗೆ ನೀವು ಆಧಾರ್ ಕಾರ್ಡ್ ಮಾಡಬಹುದು. ಆದ್ರೆ ಐದು ವರ್ಷಕ್ಕೊಮ್ಮೆ ಹಾಗೂ 15 ವರ್ಷದಲ್ಲಿ ಒಮ್ಮೆ ಆಧಾರ್ ಕಾರ್ಡ್ ನವೀಕರಣ ಮಾಡಬೇಕಾಗುತ್ತದೆ. ಇದನ್ನು ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಎಂದು ಕರೆಯುತ್ತಾರೆ. ಐದು ವರ್ಷದಲ್ಲಿದ್ದಾಗ ಮತ್ತು 15 ವರ್ಷವಾದ್ಮೇಲೆ ಒಮ್ಮೆ ಬಯೋಮೆಟ್ರಿಕ್ ಅಪ್ಡೇಟ್ ಅನಿವಾರ್ಯವಾಗಿದೆ.

ಮಕ್ಕಳ ಆಧಾರ್ ಕಾರ್ಡ್ ನವೀಕರಣಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಯಾವುದೇ ದಾಖಲೆ ನೀಡಬೇಕಾಗಿಲ್ಲ. ಪಾಲಕರು ಸ್ಥಳೀಯ ಆಧಾರ್ ಕೇಂದ್ರಕ್ಕೆ ಹೋಗಿ ಅಲ್ಲಿ ನವೀಕರಣ ಮಾಡಿಸಬೇಕು. ಆಧಾರ್ ಕೇಂದ್ರದ ಮಾಹಿತಿ  ಯುಐಡಿಎಐನ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಮಕ್ಕಳ ಜನನ ಪ್ರಮಾಣ ಹಾಗೂ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದ ಬಿಲ್ ನೀಡಿ ಆಧಾರ್ ಕಾರ್ಡ್ ಮಾಡಿಸಬಹುದು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬೆರಳು ಗುರುತು ಹಾಗೂ ಕಣ್ಣಿನ ಮಾಹಿತಿ ಪಡೆಯುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...