
ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡಲು ಸಿದ್ಧವಾಗಿದೆ. ಈ ಹೂಡಿಕೆಯೊಂದಿಗೆ ಉದ್ಯೋಗವನ್ನು ಹೆಚ್ಚಿಸಲು ಕಂಪನಿಯು ಚಿಂತಿಸುತ್ತಿದೆ. ಇದರರ್ಥ ಈ ಹೂಡಿಕೆಯಿಂದ ದೇಶದ ಅನೇಕ ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ.
ಲಾಕ್ ಡೌನ್‌ನಲ್ಲಿ ವೇಳೆ ಭಾರತದಲ್ಲಿ ಜೂಮ್ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜೂಮ್ ಬಗ್ಗೆ ಕೆಲವು ಗೊಂದಲಗಳು ಸೃಷ್ಟಿಯಾಗಿವೆ. ಜೂಮ್ ಅಪ್ಲಿಕೇಷನ್ ಚೀನಾ ಮೂಲದ್ದೆಂದು ಹೇಳಲಾಗ್ತದೆ. ಆದ್ರೆ ಕಂಪನಿ ಇದನ್ನು ತಳ್ಳಿ ಹಾಕಿದೆ. ಇದು ಅಮೆರಿಕಾ ಮೂಲದ ಕಂಪನಿ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಜಾರಿಗೆ ಬಂದ ನಂತರ ಜೂಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಜಿಯೋ ಮೀಟ್ ಇದಕ್ಕೆ ಕಠಿಣ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.