ರಿಯಲ್ಮೆ 7 ಸರಣಿಯ ಜೊತೆಗೆ ಕಂಪನಿಯು ತನ್ನ ಹೊಸ ಎಂ 1 ಸೋನಿಕ್ ಎಲೆಕ್ಟ್ರಿಕ್ ಟೂತ್ ಬ್ರಷ್ ಬಿಡುಗಡೆ ಮಾಡಿದೆ. ಇದರ ಬೆಲೆ 1,999 ರೂಪಾಯಿ. ಗ್ರಾಹಕರು ಇದನ್ನು ರಿಯಲ್ಮೆ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಸೆಪ್ಟೆಂಬರ್ 10ರಿಂದ ಈ ಎಲೆಕ್ಟ್ರಿಕ್ ಟೂತ್ ಬ್ರಷ್ ಗ್ರಾಹಕರಿಗೆ ಸಿಗಲಿದೆ.
ರಿಯಲ್ಮೆ ಎಂ 1 ಸೋನಿಕ್ ಎಲೆಕ್ಟ್ರಿಕ್ ಟೂತ್ ಬ್ರಷ್ ಸೋನಿಕ್ ಮೋಟರ್ ಹೊಂದಿದೆ ಇದು ಒಂದು ನಿಮಿಷದಲ್ಲಿ 34,000 ಬಾರಿ ಕಂಪಿಸುತ್ತದೆ. ಈ ಟೂತ್ ಬ್ರಷ್ ಬಾಯಿಯ ಯಾವುದೇ ಭಾಗವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ ಎಂದು ಕಂಪನಿ ಹೇಳಿದೆ. ಇದ್ರಲ್ಲಿ ನಾಲ್ಕು ಕ್ಲೀನಿಂಗ್ ವಿಧಾನವಿದೆ.
ಈ ಟೂತ್ ಬ್ರಷ್ 3.5 ಎಂಎಂ ತೆಳುವಾದ ಮೆಟಲ್ ಫ್ರೀ ಬ್ರಷ್ ಹೆಡ್ ಇದೆ. ಈ ಬ್ರೆಷ್ ಶೇಕಡಾ 99.99 ರಷ್ಟು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 90 ದಿನ ಬರಲಿದೆ. ಬ್ರೆಷ್ ಹೆಡ್ ಬದಲಿಸುವ ಸಮಯ ಬಂದಾಗ ಬ್ರೆಷ್ ಈ ಬಗ್ಗೆ ಸೂಚನೆ ನೀಡುತ್ತದೆ. ಕೇವಲ ಐದು ನಿಮಿಷ ಚಾರ್ಜ್ ಮಾಡಿದ್ರೆ ಎರಡು ದಿನ ಇದನ್ನು ಬಳಸಬಹುದು. ಇದು 800mAh ಬ್ಯಾಟರಿ ಹೊಂದಿದೆ.