ಆಭರಣಗಳನ್ನು ಹಾಗೂ ಅಗತ್ಯ ಕಾಗದ ಪತ್ರಗಳನ್ನು ಇಡಲು ನಾವು ಲಾಕರ್ ಬಳಸುತ್ತೇವೆ. ಬ್ಯಾಂಕ್ ಲಾಕರ್ ಸುರಕ್ಷಿತವೆಂದು ನಂಬಲಾಗಿದೆ. ಈ ಬ್ಯಾಂಕ್ ಲಾಕರ್ ನಲ್ಲಿ ಆಭರಣವಿಡಲು ನಾವು ಶುಲ್ಕ ನೀಡಬೇಕಾಗುತ್ತದೆ. ಬೇರೆ ಬೇರೆ ಬ್ಯಾಂಕ್ ಗಳ ಬ್ಯಾಂಕ್ ಲಾಕರ್ ಶುಲ್ಕ ಬೇರೆ ಬೇರೆಯಿದೆ.
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ, ಮಾರ್ಚ್ 31, 2020 ರಂದು ಲಾಕರ್‌ನ ಬಾಡಿಗೆಯನ್ನು ಹೆಚ್ಚಿಸಿದೆ. ಸಣ್ಣ, ಮಧ್ಯಮ, ದೊಡ್ಡ ಮತ್ತು ಎಕ್ಸ್‌ಎಲ್ ಎಲ್ಲಾ ಗಾತ್ರದ ಲಾಕರ್‌ಗಳ ಶುಲ್ಕವನ್ನು ಹೆಚ್ಚಿಸಿದೆ. ಎಸ್‌ಬಿಐನಲ್ಲಿ ಲಾಕರ್ ಭೇಟಿ 12 ಬಾರಿ ಉಚಿತವಾಗಿದೆ. ಇದರ ನಂತರ ಪ್ರತಿ ಭೇಟಿಗೆ 100 ರೂಪಾಯಿ ಜೊತೆ ಜಿಎಸ್ಟಿ ಹಣ ನೀಡಬೇಕು.
ಸಣ್ಣ ಲಾಕರ್ ಗೆ 1500 ರೂಪಾಯಿ, ಮಧ್ಯಮ ಲಾಕರ್ ಗೆ 3000 ರೂಪಾಯಿ ಮತ್ತು ದೊಡ್ಡ ಲಾಕರ್ ಗೆ 6000 ರೂಪಾಯಿ ಪಾವತಿಸಬೇಕಾಗುತ್ತದೆ. ಎಕ್ಸ್ ಎಲ್ ಲಾಕರ್ಗೆ 9000 ರೂಪಾಯಿ ನೀಡಬೇಕು
ಲಾಕರ್ ಶುಲ್ಕದ ಹೊರತಾಗಿ ಎಸ್‌ಬಿಐ ನೋಂದಣಿ ಶುಲ್ಕವನ್ನು ಸಹ ವಿಧಿಸುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್‌ಗಳನ್ನು ತೆರೆಯಲು ಒಂದು ಬಾರಿ ನೋಂದಣಿ ಶುಲ್ಕ 500 ಪ್ಲಸ್ ಜಿಎಸ್‌ಟಿ. ಅದೇ ಸಮಯದಲ್ಲಿ ದೊಡ್ಡ ಮತ್ತು ಎಕ್ಸ್ ಎಲ್ ಲಾಕರ್‌ಗೆ ನೋಂದಣಿ ಶುಲ್ಕ 1000 ರೂಪಾಯಿ ಜೊತೆ ಜಿಎಸ್‌ಟಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದು ವರ್ಷದಲ್ಲಿ ಗ್ರಾಹಕರಿಗೆ 15 ಉಚಿತ ಲಾಕರ್ ಬಳಕೆ ಅವಕಾಶ ನೀಡುತ್ತದೆ. ನಂತ್ರ ಪ್ರತಿ ಬಾರಿ 100 ರೂಪಾಯಿ ಶುಲ್ಕ ವಿಧಿಸುತ್ತದೆ. ಪಿಎನ್‌ಬಿಯಲ್ಲಿ ಲಾಕರ್‌ನ ವಾರ್ಷಿಕ ಬಾಡಿಗೆ ಸಣ್ಣ ಲಾಕರ್ ಗೆ 1500 ರೂಪಾಯಿ, ಮಧ್ಯಮ ಲಾಕರ್ ಗೆ 3000 ರೂಪಾಯಿ, ದೊಡ್ಡ ಲಾಕರ್ ಗೆ 5000 ರೂಪಾಯಿ, ಅತಿ ದೊಡ್ಡ ಲಾಕರ್ ಗೆ 7500 ರೂಪಾಯಿ ಮತ್ತು ಎಕ್ಸ್ ಎಲ್ ಲಾಕರ್ ಗೆ 10000 ರೂಪಾಯಿ ಶುಲ್ಕ ವಿಧಿಸುತ್ತದೆ.
ಸುಧಾರಿತ ಲಾಕರ್ ಬಾಡಿಗೆಗೆ ಪಿಎನ್‌ಬಿ ರಿಯಾಯಿತಿ ನೀಡುತ್ತದೆ. ಸಿಬ್ಬಂದಿಗೆ ಈ ವಿನಾಯಿತಿ ಶೇಕಡಾ 75 ರಷ್ಟಿರುತ್ತದೆ. ಇತರ ಗ್ರಾಹಕರಿಗೆ ಲಾಕರ್ ಬಾಡಿಗೆ ವಿನಾಯಿತಿ ಬೇರೆ ಬೇರೆ ಇರುತ್ತದೆ. ಪಿಎನ್‌ಬಿಯಲ್ಲಿ ಲಾಕರ್‌ಗೆ ನೋಂದಣಿ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ 200 ರೂಪಾಯಿ. ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ 500 ರೂಪಾಯಿ.
ಬ್ಯಾಂಕ್ ಆಫ್ ಬರೋಡಾದಲ್ಲಿ ಗ್ರಾಹಕರಿಗೆ 12 ಲಾಕರ್ ಭೇಟಿಗಳು ಉಚಿತ. ಗ್ರಾಹಕರಿಗೆ ಬ್ಯಾಂಕ್ ಲಾಕರ್ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತದೆ. ಇದಲ್ಲದೆ 3 ವರ್ಷಗಳಿಗಿಂತ ಹೆಚ್ಚು ಕಾಲ ಲಾಕರ್ ತೆಗೆದುಕೊಂಡರೆ, ಮುಂಗಡ ಬಾಡಿಗೆಯಲ್ಲಿ ನಿಮಗೆ ಶೇಕಡಾ 20 ರಷ್ಟು ರಿಯಾಯಿತಿ ಸಿಗುತ್ತದೆ. ಅಲ್ಲಿನ ಲಾಕರ್ ಬಾಡಿಗೆ ಹೀಗಿದೆ.
ಎ – 1500
ಬಿ – 2000
ಡಿ – 2800
ಸಿ – 3000
ಇ / ಎಚ್ 1 – 4000
ಜಿ – 7000
ಎಫ್ – 7000
ಎಚ್ – 7000
ಎಲ್ 1 – 10000
ಎಲ್ – 10000
ಬ್ಯಾಂಕ್ ಆಫ್ ಬರೋಡಾ 3 ವರ್ಷಗಳ ಲಾಕರ್ ಬಾಡಿಗೆ ಮುಂಗಡವಾಗ ಶೇಕಡಾ 10ರಷ್ಟು ರಿಯಾಯಿತಿ ಸಿಗುತ್ತದೆ.