ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಬೆಲೆಯ ಚೆಕ್ ಕ್ಲಿಯರಿಂಗ್ ನಿಯಮಗಳನ್ನು ಬದಲಾಯಿಸಿದೆ. ಚೆಕ್ ಪಾವತಿಗಳಲ್ಲಿ ಗ್ರಾಹಕರ ಸುರಕ್ಷತೆ ಹೆಚ್ಚಿಸಲು ಮತ್ತು ಚೆಕ್ ವಂಚನೆಯ ಪ್ರಮಾಣವನ್ನು ಕಡಿಮೆ ಮಾಡಲು ಆರ್‌ಬಿಐ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ ಪಾಸಿಟಿವ್ ಪೇ ಜಾರಿಗೆ ತರಲು ಆರ್‌ಬಿಐ ನಿರ್ಧರಿಸಿದೆ.
ಪಾಸಿಟಿವ್ ಪೇಯ ಮಾರ್ಗಸೂಚಿಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಆರ್.ಬಿ.ಐ. ಹೇಳಿದೆ. ಇದ್ರ ಅಡಿ, ಫಲಾನುಭವಿಗೆ ಚೆಕ್ ನೀಡುವ ಮೊದಲು ಚೆಕ್ ಸಂಖ್ಯೆ, ಚೆಕ್ ದಿನಾಂಕ, ಪಾವತಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ ಇತ್ಯಾದಿಗಳ ಚೆಕ್ ವಿವರಗಳನ್ನು ಹಾಗೂ ಚೆಕ್ ಹಿಂಭಾಗ ಫೋಟೋ ನೀಡಬೇಕು. ಫಲಾನುಭವಿ ಚೆಕ್ ವಿತ್ ಡ್ರಾಗೆ ಮುಂದಾದಾಗ ಪಾಸಿಟಿವ್ ಪೇ ಮೂಲಕ ಎಲ್ಲ ಮಾಹಿತಿಯನ್ನು ಹೋಲಿಸಿ, ಹೊಂದಿಕೆಯಾದಲ್ಲಿ ಮಾತ್ರ ಚೆಕ್ ವಿತ್ ಡ್ರಾ ಮಾಡಲಾಗುವುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆ ನಂತ್ರ ಇದ್ರ ಘೋಷಣೆ ಮಾಡಲಾಗಿದೆ.