ಬ್ಯಾಂಕ್ ಗ್ರಾಹಕರೇ ಕೊಂಚ ಇತ್ತ ಗಮನಿಸಿ. ಇಂದಿನಿಂದ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆಯಾಗಿದೆ. ಇದರಲ್ಲಿ ಮುಖ್ಯವಾದದ್ದು ನೀವು ಎಸ್ ಬಿ ಐ ಗ್ರಾಹಕರಾಗಿದ್ದರೆ ಈ ಸುದ್ದಿ ಓದಲೇ ಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಮಾಡಿದ ಎಲ್ಲಾ ಎಟಿಎಂ ವಹಿವಾಟುಗಳಿಗೆ ಇನ್ನು ಮುಂದೆ ಶುಲ್ಕ ಇರುತ್ತದೆ. ಈ ನಿಯಮವನ್ನು ಒಂದಿಷ್ಟು ದಿನಗಳವರೆಗೆ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಹಳೆಯ ನಿಯಮಗಳನ್ನು ಮತ್ತೆ ಜಾರಿಗೆ ತರಲಾಗಿದೆ.
ಇನ್ನು ಕೊರೊನಾದಿಂದಾಗಿ ಪಿಎಫ್‌ಆರ್‌ಡಿಎಯ ಏಪ್ರಿಲ್ 11 ರ ಸುತ್ತೋಲೆ ಪ್ರಕಾರ ಅಟಲ್ ಪಿಂಚಣಿ ಯೋಜನೆಯ ಆಟೋ ಡೆಬಿಟ್ ಅನ್ನು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಪುನರಾರಂಭಿಲಾಗುತ್ತಿದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಎಸ್‌ಬಿಐ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಕಡಿತಗೊಳಿಸಲಾಗುತ್ತಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ತಮ್ಮ ಬ್ಯಾಂಕ್ ಖಾತೆಯನ್ನು ಸೂಕ್ತ ದಾಖಲೆಗಳೊಂದಿಗೆ ನವೀಕರಿಸಬೇಕು. ಇಲ್ಲದಿದ್ದರೆ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ. ಸರಿಯಾದ ದಾಖಲೆ ನೀಡಿ ನವೀಕರಿಸದಿದ್ದರೆ ಖಾತೆ ಫ್ರೀಜ್ ಆಗಲಿದೆ. ಕೊರೊನಾದಿಂದಾಗಿ ಎಟಿಎಂ ಹಣ ಹಿಂಪಡೆಯುವಿಕೆ ಮೇಲೆ ವಿನಾಯಿತಿ ನೀಡಲಾಗಿತ್ತು. ಆದರೆ ಇಂದಿನಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿ ಹೇರಬಹುದು.