ಕೊರೊನಾದಿಂದ ತತ್ತರಿಸಿದ್ದ ಜನತೆಗೆ ಇದೀಗ ಬೆಲೆ ಏರಿಕೆಯೂ ಜೀವನವನ್ನು ಸುಡುವಂತಾಗಿದೆ. ಮೊದಲೇ ಕೆಲಸ ಇಲ್ಲದೆ ಪರದಾಡುತ್ತಿರುವ ಜನರಿಗೆ ಬೆಲೆ ಏರಿಕೆಗಳು ಜೇಬು ಸುಡುತ್ತಿವೆ. ಲಾಕ್‌ಡೌನ್ ತೆರವಾದ ಬಳಿಕ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ ಕಂಡಿದೆ.
ಹೌದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ದೈನಂದಿನ ಬಳಕೆಯ ಅಡುಗೆ ಎಣ್ಣೆ ಬೆಲೆ ಕೂಡ ಸುಮಾರು ಶೇ.35 ರಿಂದ 45 ರಷ್ಟು ಏರಿಕೆಯಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನ ತತ್ತರಿಸಿ ಹೋಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಕಡಿಮೆ ಇದ್ದ ತೈಲ ಬೆಲೆ ಇದೀಗ ಹೆಚ್ಚಾಗಿದೆ. 100 ರೂಪಾಯಿ ಇದ್ದ ಬೆಲೆ 130 ರಿಂದ 140 ರೂಪಾಯಿಗಳಷ್ಟು ಹೆಚ್ಚಾಗಿದೆ. ಪಾಮ್ ಎಣ್ಣೆ ಬೆಲೆ ಆರು ತಿಂಗಳ ಹಿಂದೆ ಲೀಟರ್‌ಗೆ 65 ರಿಂದ 75ರೂಪಾಯಿಯಷ್ಟು ಇತ್ತು. ಆದರೆ ನಂತರ 100 ರೂಪಾಯಿಯಿಂದ 120 ರೂಪಾಯಿಯಷ್ಟಾಗಿದೆ.
ಇನ್ನು ಅಡುಗೆ ಎಣ್ಣೆಯಲ್ಲಿ ಏರಿಕೆ ಕಾರಣ ಬೇರೆ ಬೇರೆ ದೇಶಗಳಿಂದ ಪಾಮ್ ಎಣ್ಣೆಯನ್ನು ಆಮದು ಮಾಡಲಾಗುತ್ತಿತ್ತು. ಆದರೆ ಇದೀಗ ಕೊರೊನಾದಿಂದಾಗಿ ಇದಕ್ಕೆ ಅಡ್ಡಿಯಾಗಿದೆ. ಇನ್ನು ಹೆಚ್ಚಿನ ಮಳೆಯಿಂದಾಗಿಯೂ ಸೇಂಗಾ, ಸೂರ್ಯಕಾಂತಿ, ಸೋಯಾಬೀನ್ ಬೆಳೆಗಳಿಗೆ ಹಾನಿಯಾಗಿದ್ದರಿಂದಲೂ ಬೆಲೆ ಏರಿಕೆಯಾಗಿದೆ.