ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಆರಂಭವಾಗಿತ್ತು. ಒಂದು ಹಂತದಲ್ಲಿ ಚಿನ್ನದ ಬೆಲೆ ಆರು ತಿಂಗಳ ಹಿಂದಿನ ಹಂತ ತಲುಪಿದ್ದು, ಇದರಿಂದಾಗಿ ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿತ್ತು.
ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಮಂಗಳವಾರ ಕಹಿ ಸುದ್ದಿ ಸಿಕ್ಕಿದೆ. ಮಂಗಳವಾರದಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಇಳಿಮುಖ ಕಂಡು ಬಂದಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಭರ್ಜರಿ ಗುಡ್ ನ್ಯೂಸ್: ಕಚ್ಚಾ ತೈಲ ದರ ಭಾರೀ ಇಳಿಕೆ
ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 116 ರೂಪಾಯಿ ಏರಿಕೆಯಾಗುವ ಮೂಲಕ 44,374 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು ಕೆಜಿ ಬೆಳ್ಳಿಗೆ 117 ರೂಪಾಯಿ ಇಳಿಕೆಯಾಗಿದ್ದು, 65,299 ರೂಪಾಯಿಗಳಿಗೆ ಮಾರಾಟವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಭಾರತದ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.